ಸುವರ್ಣ ಗೆಡ್ಡೆ ಹಲ್ವ

0
407

 
ವಾರ್ತೆ ರೆಸಿಪಿ
ಬೇಕಾಗುವ ಪದಾರ್ಥಗಳು:
ತುರಿದ ಸುವರ್ಣಗೆಡ್ಡೆ 1 ಕಪ್, ಸಕ್ಕರೆ ಅರ್ಧ ಕಪ್, ತುಪ್ಪ ಅರ್ಧ ಕಪ್, ಏಲಕ್ಕಿ ಪುಡಿ ಸ್ವಲ್ಪ, ಅರಿಶಿಣ ಕಾಲು ಚಮಚ, ಖೋವಾ 2 ಚಮಚ, ದ್ರಾಕ್ಷಿ ಗೋಡಂಬಿ ಸ್ವಲ್ಪ, ಹುರಿದ ಗೋಧಿ ಹಿಟ್ಟು 1 ಚಮಚ.
 
ಮಾಡುವ ವಿಧಾನ:
ಬಾಣಲೆಯಲ್ಲಿ 2 ಚಮಚ ತುಪ್ಪ ಹಾಕಿ ಸುವರ್ಣಗೆಡ್ಡೆ ತುರಿಯನ್ನು ಅಂಟು ಹೋಗುವವರೆಗೆ ಚೆನ್ನಾಗಿ ಬಾಡಿಸಿಕೊಳ್ಳಿ. ಅರಿಶಿಣ, ಖೋವಾ ಸಕ್ಕರೆ ಸೇರಿಸಿ ಮತ್ತಷ್ಟು ಬಾಡಿಸಿ, ದ್ರಾಕ್ಷಿ, ಗೋಡಂಬಿ ತುಪ್ಪದಲ್ಲಿ ಕರಿದು ಹಾಕಿ ಉಳಿದ ತುಪ್ಪವನ್ನು ಹಾಕಿ, ಏಲಕ್ಕಿ ಪುಡಿ, ಹುರಿದ ಗೋಧಿಹಿಟ್ಟು ಹಾಕಿ ಚೆನ್ನಾಗಿ ಕೈಯಾಡಿಸಿ. ಈ ಹಲ್ವವನ್ನು 2-3 ದಿನವಿಟ್ಟು ತಿನ್ನಬಹುದು.

LEAVE A REPLY

Please enter your comment!
Please enter your name here