ಸುವರ್ಣ ಗೆಡ್ಡೆಯ ಬೋಂಡ

0
387

ವಾರ್ತೆ ರೆಸಿಪಿ
ಬೇಕಾಗುವ ಪದಾರ್ಥಗಳು:
ಕಡ್ಲೆಹಿಟ್ಟು 1 ಕಪ್, 1 ಚಮಚ ಅಕ್ಕಿಹಿಟ್ಟು, ಅಚ್ಚಕಾರದ ಪುಡಿ 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಸೋಡ, ಬೋಂಡಾ ಮಸಾಲೆ ಪುಡಿ 1 ಚಮಚ, ತೆಳ್ಳಗೆ ಬಿಲ್ಲೆ ಮಾಡಿದ ಸುವರ್ಣ ಗೆಡ್ಡೆ, ಕರಿಯಲು ಎಣ್ಣೆ.
 
ಮಸಾಲೆ ಪುಡಿ ಮಾಡುವ ವಿಧಾನ: ಇಂಗು ಕಾಲು ಚಮಚ, ಓಮು ಅರ್ಧ ಚಮಚ, ಕೊತ್ತಂಬರಿ ಬೀಜ 1 ಚಮಚ, ಜೀರಿಗೆ 1 ಚಮಚ ಎಲ್ಲವನ್ನು ಸೇರಿಸಿ ಸಾಧಾರಣ ಪುಡಿ ಮಾಡಿ ಇಟ್ಟುಕೊಳ್ಳಿ.
 
ಮಾಡುವ ವಿಧಾನ:
ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಖಾರದಪುಡಿ, ಉಪ್ಪು, ಸೋಡ, ಮಸಾಲೆಪುಡಿ ಎಲ್ಲವನ್ನೂ ಚೆನ್ನಾಗಿ ಕಲಸಿ, ನಂತರ ನೀರು ಹಾಕಿ ಬೋಂಡಾ ಹಿಟ್ಟಿನ ಹದಕ್ಕೆ ಕಲಸಿ, ಸುವರ್ಣಗೆಡ್ಡೆ ಬಿಲ್ಲೆಗಳನ್ನು ಕಲಸಿದ ಹಿಟ್ಟಿನಲ್ಲಿ ಅದ್ದಿ ಹದವಾಗಿ ಎಣ್ಣೆಯಲ್ಲಿ ಕರಿಯಿರಿ. ರುಚಿಯಾದ ಬೋಂಡಾ ಸಿದ್ಧ.

LEAVE A REPLY

Please enter your comment!
Please enter your name here