ಸುಬ್ರಮಣಿಯನ್ ಕಾರ್ಯಕ್ರಮ ರದ್ದುಗೊಳಿಸಿದ ಬಿಜೆಪಿ

0
387

ವರದಿ:ಲೇಖಾ
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಆರ್​ಬಿಐ ಗವರ್ನರ್ ರಘುರಾಮ್ ರಾಜನ್ ಹಾಗೂ ಸರ್ಕಾರಿ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿರುವುದಕ್ಕೆ ಬಿಜೆಪಿ ಹಿರಿಯ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ವಿರುದ್ಧ ಬಿಜೆಪಿ ವರಿಷ್ಠರು ಅಸಮಾಧಾನಗೊಂಡಿದ್ದಾರೆ. ಇದೇ ಕಾರಣಕ್ಕಾಗಿ ಸುಬ್ರಮಣಿಯನ್ ಸ್ವಾಮಿ ಅವರು ಭಾಗವಹಿಸಬೇಕಿದ್ದ ಎರಡು ಕಾರ್ಯಕ್ರಮಗಳನ್ನು ಬಿಜೆಪಿ ರದ್ದುಗೊಳಿಸಿದೆ.
 
 
ಭಾನುವಾರ ಮುಂಬೈ ನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ಹಾಗೂ ಈ ವಾರದಲ್ಲಿ ಚೆನ್ನೈ ನಲ್ಲಿ ಆರ್ ಎಸ್ ಎಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಭಾಗವಹಿಸಿ ಮಾತನಾಡಬೇಕಿತ್ತು. ಆದರೆ ಎರಡೂ ಕಾರ್ಯಕ್ರಮಗಳು ದಿಢೀರ್ ರದ್ದುಗೊಂಡಿದೆ.
 
 
 
ಪ್ರಧಾನಿ ನರೇಂದ್ರ ಮೋದಿಯವರು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ವ್ಯವಸ್ಥೆಗಿಂತ ನಾವೇ ದೊಡ್ಡವರು ಎಂದುಕೊಳ್ಳುವುದು ಸರಿಯಲ್ಲ. ಅತಿಯಾದ ಪ್ರಚಾರದ ಗೀಳು ವ್ಯಕ್ತಿತ್ವವನ್ನು ಹಾಳುಮಾಡುತ್ತದೆ ಎಂಬ ಕಿವಿಮಾತು ಹೇಳುವ ಮೂಲಕ ಸುಬ್ರಮಣಿಯನ್ ಸ್ವಾಮಿ ಅವರನ್ನು ಪರೋಷವಾಗಿ ಟೀಕಿಸಿದ್ದರು.
 
 
 
ಈಗ ಸ್ವಾಮಿ ಭಾಗವಹಿಸಿ ಮಾತನಾಡಬೇಕಿದ್ದ ಪಕ್ಷದ ವತಿಯಿಂದ ಆಯೋಜಿಸಲಾಗಿದೆ ಎನ್ನಲಾದ ಎರಡೂ ಕಾರ್ಯಕ್ರಮಗಳು ಏಕಾಏಕಿ ರದ್ದುಗೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
 
 
ಒಟ್ಟಿನಲ್ಲಿ ಹಲವರ ವಿರುದ್ಧ ಸುಬ್ರಹ್ಮಣಿಯನ್ ಸ್ವಾಮಿ ನಡೆಸಿದ್ದ ವಾಗ್ದಾಳಿ ಹಾಗೂ ಅದಕ್ಕೆ ಬಿಜೆಪಿ ವರಿಷ್ಠರು ಅಸಮಾಧಾನಗೊಂಡಿರುವುದೇ ಸ್ವಾಮಿ ಕಾರ್ಯಕ್ರಮ ರದ್ದಾಗಲು ಕಾರಣ ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here