ರಾಷ್ಟ್ರೀಯ ಪ್ರತಿನಿಧಿ ವರದಿ
ಯಾವುದೇ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಜಾತಿ, ಮತ ಮತ್ತು ಧರ್ಮದ ಆಧಾರದ ಮೇಲೆ ಮತಯಾಚನೆ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪುನೀಡಿದೆ.
ಚುನಾವಣೆಯಲ್ಲಿ ಧರ್ಮ ಮತ್ತ ಜಾತಿಯಾಧಾರದ ಮೇಲೆ ಮತ ಯಾಚಿಸುವ ವಿರುದ್ಧ ದಾಖಲಾಗಿದ್ದ ವಿವಿಧ ಪ್ರಕರಣಗಳ ವಿಚಾರಣೆ ನಡೆಸಿದ ಜಸ್ಟಿಸ್ ಟಿಎಸ್ ಠಾಕೂರ್ ನೇತೃತ್ವದ ಸುಪ್ರೀಂ ಕೋರ್ಟ್ ಸಾಂವಿಧಾನಕತಿ ಪೀಠವು, “ಚುನಾವಣೆ ಎಂಬುದು ಜಾತ್ಯಾತೀತ ಪ್ರಕ್ರಿಯೆಯಾಗಿದ್ದು, ಆ ನಿಟ್ಟಿನಲ್ಲೇ ಅದರ ಪ್ರಕ್ರಿಯೆಗಳು ನಡೆಯಬೇಕು. ರಾಜಕೀಯ ಪಕ್ಷಗಳು ಜಾತಿ, ಮತ ಮತ್ತು ಧರ್ಮದ ಆಧಾರದ ಮೇಲೆ ಮತಯಾಚನೆ ಮಾಡಬಾರದು. ಚುನಾವಣೆಗಳಲ್ಲಿ ಜಾತ್ಯಾತೀತವಾದವೇ ಮುಂಚೂಣಿಯಲ್ಲಿರಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.