'ಸುಪ್ರೀಂ' ಸೂಚನೆ

0
224

ರಾಷ್ಟ್ರೀಯ ಪ್ರತಿನಿಧಿ ವರದಿ
ಕರ್ನಾಟಕ, ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದೆ.
 
 
 
ನ್ಯಾ.ದೀಪಕ್ ಮಿಶ್ರಾ, ಜಸ್ಟೀಸ್ ಉದಯ್ ಲಲಿತಾ ಪೀಠ ಅರ್ಜಿ ವಿಚಾರಣೆ ನಡೆಸಿದೆ. 2 ರಾಜ್ಯಗಳು ಕಾನೂನಿನ ಘಟನೆ, ಗೌರವ ಎತ್ತಿಹಿಡಿಯಲಿ. ಬಂದ್, ಪ್ರತಿಭಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
 
 
 
ರಾಜ್ಯಗಳ ಜನರು ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಯಾವುದೇ ಧರಣಿ ನಡೆಯಬಾರದೆಂದು ನಮ್ಮ ಉದ್ದೇಶವಾಗಿದೆ. ಸುಪ್ರೀಂ ಕೋರ್ಟ್ ನ ಆದೇಶದ ನಂತರ ಬಂದ್ ನಡೆದಿದೆ. ಕೋರ್ಟ್ ನ ಆದೇಶದಿಂದ ತೊಂದರೆಗೊಳಗಾದವರು, ತೊಂದರೆ ಬಳಿಕ ಕಾನೂನು ಪರಿಹಾರ ಪಡೆದುಕೊಳ್ಳಬೇಕು. ಹಾಗೇಯೇ ಕೋರ್ಟ್ ಗೂ ಹೋಗಬಹುದು. ಸಾರ್ವಜನಿಕ, ಖಾಸಗಿ ಆಸ್ತಿ ಹಾನಿ ಬಗ್ಗೆ ಕೋರ್ಟ್ ಕಾಳಜಿ ವಹಿಸುತ್ತದೆ.
 
 
 
ತಮಿಳುನಾಡಿನ ಸಾಮಾಜಿಕ ಕಾರ್ಯಕರ್ತ ಶಿವಕುಮಾರ್ ಅವರು ಸಲ್ಲಿಸಿದ ಕಾನೂನು ಸುವ್ಯವಸ್ಥೆ ಬಗ್ಗೆ ಅರ್ಜಿ, ಕೋರ್ಟ್ ಆದೇಶ ಮಾಹಿತಿ ತಿಳಿಸಿ. ಉಭಯ ಸರ್ಕಾರಗಳಿಗೆ ತಲುಪಿಸಲು ವಕೀಲರಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಕರ್ನಾಟಕ ಸರ್ಕಾರ ಪರ ವಕೀಲರಾದ ವಿ ಎನ್ ರಘುಪತಿ ಮತ್ತು ತಮಿಳುನಾಡು ಸರ್ಕಾರ ಪರ ವಕೀಲ ಬಾಲಾಜಿಗೆ ಕೋರ್ಟ್ ಸೂಚನೆ ನೀಡಿದೆ.

LEAVE A REPLY

Please enter your comment!
Please enter your name here