ಸುಪ್ರೀಂಗೆ ರಿಜಿಸ್ಟ್ರಾರ್ ಗೆ ಅರ್ಜಿ ಸಲ್ಲಿಕೆ

0
307

ಬೆಂಗಳೂರು ಪ್ರತಿನಿಧಿ ವರದಿ
ತಮಿಳು ನಾಡಿಗೆ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಮಾರ್ಪಾಡು ಮಾಡಬೇಕೆಂದು ಕೋರಿ ರಾಜ್ಯ ಸರ್ಕಾರ ಭಾನುವಾರ ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಗೆ ಅರ್ಜಿ ಸಲ್ಲಿಸಿದೆ.
 
 
 
ತಮಿಳು ನಾಡಿಗೆ 15 ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂದು ಸೆಪ್ಟೆಂಬರ್ 5ರಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶಕ್ಕೆ ಮಾರ್ಪಾಡು ಮಾಡಬೇಕೆಂದು ಕೋರಿ ಕರ್ನಾಟಕ ಸರ್ಕಾರ ಅರ್ಜಿ ಹಾಕಿದೆ.
 
 
 
ಕೋರ್ಟ್ ನ ಆದೇಶದಂತೆ ತಮಿಳು ನಾಡಿಗೆ ಈಗಾಗಲೇ 66 ಸಾವಿರ ಕ್ಯೂಸೆಕ್ ನೀರು ಹರಿಸಿದ್ದೇವೆ. ಇನ್ನು ಬಿಡುಗಡೆ ಮಾಡಲು ನಮ್ಮ ಜಲಾಶಯದಲ್ಲಿ ನೀರಿಲ್ಲ. ಹಾಗಾಗಿ ಆದೇಶಕ್ಕೆ ಮಾರ್ಪಾಡು ತರಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

LEAVE A REPLY

Please enter your comment!
Please enter your name here