ಸೀಯಾಳದಲ್ಲಿ ಅವಧೂತರು ತೋರಿದ ಚಮಾತ್ಕಾರ ಏನುಗೊತ್ತೇ?

0
1050

ನಿತ್ಯ ಅಂಕಣ: ಭಾಗ ೪

ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಪಾರ್ವತಿ ಎಂಬ ಹೆಣ್ಣು ಮಗಳು ಅಪಸ್ಮಾರ ಕಾಯಿಲೆಗೆ ತುತ್ತಾಗಿದ್ದಳು. ಹೆತ್ತವರು ವೈದ್ಯರಲ್ಲಿ ತೋರಿಸಿ ಔಷಧೋಪಚಾರಗಳನ್ನು ನೆಡೆಸಿದ್ದರು. ಅದು ಫಲ ನೀಡದರಿಂದ, ನಾಟಿ ಪಂಡಿತರ ಮೂಲಕ ತಂದೆ ಅವರು ಬಾಲಕಿಗೆ ಚಿಕಿತ್ಸೆ ನೀಡಿಸಿದ್ದರು. ಆದರೆ ಯಾವೊಂದು ಔಷಧೋಪಚಾರಗಳು ಪಾರ್ವತಿಗೆ ಬಾಧಿಸಿದ ಕಾಯಿಲೆ ಗುಣಪಡಿಸಲಿಲ್ಲ. ಭೂತ ಪ್ರೇತಗಳ ಬಾಧೆಯೆಂದು ಭಾವಿಸಿದ ಹೆತ್ತವರು ಜ್ಯೋತಿಷಿಗಳ ಮೂಲಕ ಯಂತ್ರ- ತಂತ್ರ ಮಂತ್ರೋಪಚಾರಗಳ ನಡೆಸಿದರು. ಆದರೂ ಪಾರ್ವತಿ ಅಪಸ್ಮಾರ ಕಾಯಿಲೆಯಿಂದ ಮುಕ್ತಿ ಪಡೆಯಲಿಲ್ಲ. ಅದುವರೆಗೂ ಮಗಳ ಚಿಕಿತ್ಸೆಗೆ ಬಹಳಷ್ಟು ಹಣವನ್ನು ತಂದೆ ವ್ಯಯ ಮಾಡಿದ್ದರು. ಚಿಂತೆಗೊಳಗಾದ ಪಾರ್ವತಿಯ ತಂದೆಗೆ ಆಪ್ತರೊಬ್ಬರು ಸಲಹೆ ನೀಡಿದರು.

ಚಿತ್ರ : ಅಂತರ್ಜಾಲ ಕೃಪೆ

ಅವಧೂತ ನಿತ್ಯಾನಂದ ಸ್ವಾಮೀಜಿಗಳು ಮಂಜೇಶ್ವರದಲ್ಲಿ ಕಂಡು ಬರುತ್ತಿದ್ದಾರೆ. ನೀವು ಮಗಳನ್ನು ಒಮ್ಮೆ ಅವರಿದ್ದಲ್ಲಿಗೆ ಕರೆದುಕೊಂಡು ಹೋಗಿರಿ. ಅವರು ಮಹಾಮಹಿಮರು. ಅವರಿಂದ ನಿಮ್ಮ ಮಗಳ ರೋಗ ನಿವಾರಣೆಯಾಗುದಂತು ಖಂಡಿತವೆಂದು ಭರವಸೆ ಮೂಡಿಸಿದರು. ಬಾಲಕಿಯ ತಂದೆ, ಆಪ್ತರು ನೀಡಿದ ಸಲಹೆ ಮೆರೆಗೆ, ಪಾರ್ವತಿಯನ್ನು ನಿತ್ಯಾನಂದರ ಬಳಿಗೆ ಕರೆದುಕೊಂಡು ಹೋದರು. ತಂದೆ ಮಗಳು ನಿತ್ಯಾನಂದರ ಪಾದಗೆರಗಿ ನಮಸ್ಕರಿಸಿದರು. ಬಂದಿರುವ ವಿಷಯ ಪ್ರಸ್ತಾಪ ಮಾಡುವ ಮೊದಲೇ ನಿತ್ಯಾನಂದರು ನಿಮ್ಮ ಸಮಸ್ಯೆ ಏನೆಂದು ನನಗೆ ತಿಳಿದಿದೆ. “ಅಪಸ್ಮಾರ ಕಾಯಿಲೆ ಅಲ್ವ..?” ಎಂದರು. ಗುರುಗಳ ನುಡಿ ಆಲಿಸಿದ ಪಾರ್ವತಿಯ ತಂದೆ ಅವರು ಆಶ್ಚರ್ಯಚಕಿತರಾದರು.

ತಂದೆ ಮಗಳು ಸಮರ್ಪಿಸಿದ ಸಿಯಾಳವನ್ನು ನಿತ್ಯಾನಂದರು ರಂಧ್ರಗೊಳಿಸಿದರು. ಸಿಯಾಳದ ನೀರಿನಲ್ಲಿ ನಿತ್ಯಾನಂದರು ತಮ್ಮ ಹೆಬ್ಬರಳನ್ನು ಮುಳುಗಿಸಿದರು. ನಂತರ ನಿತ್ರಾಣಗೊಂಡಿರುವ ಬಾಲಕಿಗೆ ಕುಡಿಯಲು ನೀಡಿದರು. ಸಿಯಾಳ ನೀರು ಕುಡಿದ ಪಾರ್ವತಿ ಒಂದಿಷ್ಟು ಸಮಯ ಪ್ರಜ್ಞಾಹಿನಳಾದಳು. ನಂತರ ಸಹಜ ಸ್ಥಿತಿಗೆ ಬಂದಳು. ಮತ್ತೆ ಪಾರ್ವತಿಗೆ ಅಪಸ್ಮಾರ ಕಾಯಿಲೆಯು ಅವಳತ್ತ ಸುಳಿಯಲಿಲ್ಲ. ಪಾರ್ವತಿ ಮುಂದೆ ಕಲಿತು ಅಧ್ಯಾಪಿಕಿ ಆಗುತ್ತಾಳೆ. ಕಾಂಞಗಾಡ್ ಇಲ್ಲಿಯ ಶಾಲೆಯೊಂದರಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಾರೆ. ಈ ಅಧ್ಭುತ ಅವಧೂತರ ಲೀಲೆಯ ಅನುಭೂತಿಯನ್ನು ಪಾರ್ವತಿ ಅಮ್ಮ ಬಹಳಷ್ಟು ಜನರಲ್ಲಿ ಹಂಚಿಕೊಂಡಿದ್ದಾರೆ. ಹೀಗೆ ಪರಬ್ರಹ್ಮ ನಿತ್ಯಾನಂದರು ರೋಗ ಪಿಡಿತರನ್ನು ರೋಗಗಳಿಂದ ಮುಕ್ತಿ ದೊರಕಿಸಿದ ಪವಾಡಗಳು ಎಣಿಕೆಗೆ ಸಿಗದಷ್ಟು ನಡೆದು ಹೋಗಿವೆ. ಅದೇಷ್ಟೋ ಭಕ್ತರು ಅವರ ದರ್ಶನ ಪಡೆದು ಅನುಗ್ರಹಿತರಾಗಿದ್ದಾರೆ.

ತಾರಾನಾಥ್‌ ಮೇಸ್ತ ಶಿರೂರು

Advertisement

LEAVE A REPLY

Please enter your comment!
Please enter your name here