ಸೀಮೆಎಣ್ಣೆ ಮುಕ್ತ ನಗರ

0
240

 
ರಾಷ್ಟ್ರೀಯ ಪ್ರತಿನಿಧಿ ವರದಿ
ಭಾರತದಲ್ಲಿ ಚಂಡೀಗಡ ದೇಶದ ಮೊದಲ ಸೀಮೆ ಎಣ್ಣೆ ಮುಕ್ತ ನಗರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
 
 
ಚಂಡೀಗಡದಲ್ಲಿ ಎಲ್ಲಾ ಮನೆಗಳಿಗೂ ಎಲ್ ಬಿಜಿ ಸಂಪರ್ಕ ನೀಡಿದ ಹಿನ್ನಲೆಯಲ್ಲಿ ಸೀಮೆಎಣ್ಣೆ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ. ಏಪ್ರಿಲ್ 1ರಿಂದ ಸಬ್ಸಿಡಿ ಮತ್ತು ಸಬ್ಸಿಡಿಯೇತರ ಸೀಮೆಎಣ್ಣೆ ವಿತರಣೆಯನ್ನು ಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.
 
 
ಯಾವುದೇ ಮನೆಯಲ್ಲೂ ಅಡುಗೆ, ದೀಪಕ್ಕೆ ಸೀಮೆಎಣ್ಣೆ ಬಳಸುತ್ತಿಲ್ಲ. ಸೀಮೆಎಣ್ಣೆ ಮುಕ್ತ ನಗರವನ್ನಾಗಿಸಲು ಹಲವು ತಿಂಗಳಿಂದ ಚಂಡೀಗಡ ಶ್ರಮವಹಿಸಿತ್ತು. ಈ ಶ್ರಮಕ್ಕೆ ಪೆಟ್ರೋಲಿಯಂ ಸಚಿವಾಲಯ ನೆರವು ನೀಡಿ, ಸೀಮೆಎಣ್ಣೆ ಮುಕ್ತ ನಗರವನ್ನಾಗಿಸಿದೆ. ದೇಶದಲ್ಲಿ ಸೀಮೆಎಣ್ಣೆ ಮುಕ್ತ ಪ್ರಥಮ ನಗರವಾಗಿದೆ.

LEAVE A REPLY

Please enter your comment!
Please enter your name here