ಸೀಮೆಎಣ್ಣೆ ಬೇಡದವರಿಗೆ ಉಚಿತ ಬಲ್ಬ್

0
338

ಬೆಳಗಾವಿ ಪ್ರತಿನಿಧಿ ವರದಿ
ಅನಾಥಾಶ್ರಮ, ವೃದ್ಧಾಶ್ರಮಕ್ಕೆ ಸರ್ಕಾರದಿಂದ ಉಚಿತ ಅಕ್ಕಿ ದೊರೆಯಲಿದೆ. ದಾಸೋಹ ಯೋಜನೆಯಡಿಯಲ್ಲಿ ಉಚಿತ ಅಕ್ಕಿ ಪೂರೈಕೆಯಾಗಲಿದೆ ಎಂದು ಆಹಾರ ಸಚಿವ ಯು ಟಿ ಖಾದರ್ ಹೇಳಿದ್ದಾರೆ.
 
 
ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಸಚಿವರು ಈ ಯೋಜನೆಗೆ ಸಂಸ್ಥೆಗಳನ್ನು ಗುರುತಿಸಿ ಅರ್ಜಿ ಸ್ವೀಕರಿಸಲು ಸೂಚಿಸಲಾಗಿದೆ. ಆಹಾರ ನಿರೀಕ್ಷಕರಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ.
 
 
ಗ್ರಾಮೀಣಪ್ರದೇಶದ ಕಾರ್ಡುದಾರರಿಗೆ LED ಬಲ್ಬ್ ನೀಡಲಾಗುವುದು. ಅನಿಲಸಂಪರ್ಕ ಹೊಂದಿರುವ ಕಾರ್ಡುದಾರರಿಗೆ ಬಲ್ಬ್ ನೀಡಲಾಗುತ್ತದೆ. ಸೀಮೆಎಣ್ಣೆ ಬೇಡವೆಂದು ಬರೆದುಕೊಟ್ರೆ ಉಚಿತ ಬಲ್ಬ್ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here