ಸೀನಾ ಸ್ಥಿತಿ ಗಂಭೀರ: 15 ಮಂದಿ ವಶ

0
327

 
ಬೆಂಗಳೂರು ಪ್ರತಿನಿಧಿ ವರದಿ
ಬೆಂಗಳೂರಿನಲ್ಲಿ ಎಪಿಎಂಸಿ ಅಧ್ಯಕ್ಷನ ಮೇಲೆ ಫೈರಿಂಗ್ ಪ್ರಕರಣ ಸಂಬಂಧ 15 ಮಂದಿ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ವಿಶೇಷ ತನಿಖಾ ತಂಡದಿಂದ ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
 
 
ವಿವಿಧ ಪೊಲೀಸ್ ಠಾಣೆಗಳ ರೌಡಿ ಶೀಟ್ ನಲ್ಲಿರುವವರನ್ನು ವಶಕ್ಕೆ ಪಡೆಯಲಾಗಿದೆ. ಬಾಗಲೂರು, ನೆಲಮಂಗಲ, ಸುಂಕದಕಟ್ಟೆ, ರಾಜಾನುಕುಂಟೆಯಲ್ಲಿರುವ ರೌಡಿಗಳನ್ನು ಆರೆಸ್ಟ್ ಮಾಡಲಾಗಿದೆ.
 
 
 
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಗೊಂಡ ಕಡಬಗೆರೆ ಶ್ರೀನಿವಾಸ್ ಅಲಿಯಾಸ್ ಡಾಬಾ ಸೀನಾ ಸ್ಥಿತಿ ಗಂಭೀರವಾಗಿದೆ. ವೆಂಟಿಲೇಟರ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಸದ್ಯ ಸೀನಾ ಕೋಮ ಸ್ಥಿತಿಯಲ್ಲಿದ್ದು, ಕೊಲಂಬುಯಾ ಏಷ್ಯಾ ಆಸ್ಪತ್ರೆಯ ಐಸಿಯೂನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶ್ರೀನಿವಾಸ್ ದೇಹಕ್ಕೆ ಮೂರು ಗುಂಡು ತಾಗಿತ್ತು. ಭುಜಕ್ಕ 1ಗುಂಡು, ಹೊಟ್ಟೆಗೆ 2 ಗುಂಡು ತಾಗಿತ್ತು. ನಿನ್ನೆ ಶಸ್ತ್ರಚಿಕಿತ್ಸೆ ನಡೆಸಿ 3 ಗುಂಡುಗಳನ್ನು ತೆಗೆಯಲಾಗಿತ್ತು. ಹೊಟ್ಟೆಗೆ ಹೊಕ್ಕ ಗುಂಡಿನಿಂದ ಲಿವರ್ ಡ್ಯಾಮೇಜ್ ಶಂಕಿಸಲಾಗಿದೆ.
 
 
ಬೆಂಗಳೂರಿನಲ್ಲಿ ಹಾಡುಹಗಲೇ ಎಪಿಎಂಸಿ ಅಧ್ಯಕ್ಷನ ಮೇಲೆ ಗುಂಡಿನ ದಾಳಿ ನಡೆದಿತ್ತು. ನಗರದ ಕೋಗಿಲು ಕ್ರಾಸ್ ನಲ್ಲಿ ದಾಸನಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಅಲಿಯಾಸ್ ಡಾಬಾ ಸೀನಾ ಮೇಲೆ ಫೈರಿಂಗ್ ನಡೆದಿತ್ತು. ಪಲ್ಸರ್ ಬೈಕ್ ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಕೋಗಿಲು ಕ್ರಾಸ್ ಸಿಗ್ನಲ್ ನಲ್ಲಿ ಕಾರಿನಲ್ಲಿ ಕುಳಿತಿದ್ದಾಗ ಈ ಕೃತ್ಯ ಎಸಗಿದ್ದರು.

LEAVE A REPLY

Please enter your comment!
Please enter your name here