ಸಿ.ಸಿ.ಟಿ.ವಿ. ನಿಯಂತ್ರಣ ಕೊಠಡಿ ಉದ್ಘಾಟನೆ

0
514

ನಮ್ಮ ಪ್ರತಿನಿಧಿ ವರದಿ
ಕರ್ನಾಟಕ ಕಾರಾಗೃಹಗಳ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಸುಮಾರು 18 ಕೋಟಿ ರೂ. ವೆಚ್ಚದಲ್ಲಿ ಹಾಕಲಾದ ಸಿ.ಸಿ.ಟಿ.ವಿ. ನಿಯಂತ್ರಣ ಕೊಠಡಿಯನ್ನು ಉದ್ಫಾಟಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು 11 ಜನ ಪೊಲೀಸರಿಗೆ (ಅಧಿಕಾರಿಗಳು ಸೇರಿದಂತೆ) ರಾಷ್ಟ್ರಪತಿ ಪದಕ ನೀಡಿ ಗೌರವಿಸಿದರು.
ಪೊಲೀಸ್ ಮಹಾ ನಿರ್ದೇಶಕರು ಹಾಗು ಕರ್ನಾಟಕ ಕಾರಗೃಹಗಳ ಮಹಾನಿರೀಕ್ಷಕರ ಕಚೇರಿಯಲ್ಲಿ ಇಂದು ಈ ಕುರಿತು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು.
ಎಲ್ಲಾ ಪದಕ ವಿಜೇತರಿಗೂ ಅಭಿನಂದಿಸಿ, ಕಾರಾಗೃಹಗಳು ಇನ್ನಷ್ಟು ಅಭಿವೃದ್ದಿ ಹೊಂದಬೇಕು. ಈ ಕಚೇರಿಯಲ್ಲಿ ಅಳವಡಿಸಲಾಗಿರುವ ಸಿ.ಸಿ. ಟಿ.ವಿ. ಗಳು ರಾಜ್ಯದ ಎಲ್ಲಾ ಕಾರಾಗೃಹಗಳ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಲು ಸಹಕಾರಿಯಾಗುತ್ತದೆ. ಇದರಿಂದ ಬೇರೆ ಕಾರಾಗೃಹಗಳು ಸಮರ್ಪಕವಾಗಿ ಕೆಲಸ ನಿರ್ವಹಿಸಲು ಇವು ಸಹಕಾರಿಯಾಗುತ್ತದೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಹೊಸ ಕಾರಗೃಹ ಉದ್ಫಾಟನೆಗೆ ಸಿದ್ದವಿದೆ. ಮಂಗಳೂರಿನಲ್ಲಿ ಸಹ ಹೊಸ ಕಾರಾಗೃಹ ನಿರ್ಮಾಣವಾಗಬೇಕಿದೆ.ಈಗ ನಗರಗಳು ಬೆಳೆಯುತ್ತಿರುವ ನಿಟ್ಟಿನಲ್ಲಿ ಹೊಸ ಕಾರಾಗೃಹಗಳನ್ನು ಊರಿಗಿಂತ 50 ಕಿಮೀ ಹೊರಗೆ ನಿರ್ಮಾಣ ಮಾಡುವುದು ಒಳಿತು. ಸನ್ನಡತೆಯ ದೃಷ್ಠಿಯಿಂದ ಕಳೆದ ವರ್ಷ 650 ಖೈದಿಗಳನ್ನು ಸರ್ಕಾರ ಬಿಡುಗಡೆಗೊಳಿಸಿದೆ. ಮುಂದಿನ ಜನವರಿ 26 ರ ವೇಳೆಗೆ ಇನ್ನೂ 250 ಖೈದಿಗಳನ್ನು ಬಿಡುಗಡೆಗೊಳಿಸಲಾಗುವುದು. ಇಲಾಖೆಯು ಸರ್ಕಾರೇತರ ಸಂಸ್ಥೆಯ ಸಹಯೋಗದಲ್ಲಿ ಬಿಡುಗಡೆಯಾದ ಖ್ಯೆದಿಗಳ ಚಲನವಲನ ಕುರಿತ ರೂಪಾಂತರ ಪ್ರಯೋಗವನ್ನು ಸಹ ನಡೆಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರಾಗೃಹಗಳ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಮಹಾ ನಿರೀಕ್ಷಕರಾದ ಹೆಚ್.ಎನ್. ಸತ್ಯನಾರಾಯಣ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here