ಸಿ ವೋಟರ್ ಎಕ್ಸಿಟ್ ಫೋಲ್ ಸಮೀಕ್ಷೆ ರಾಜಸ್ಥಾನದಲ್ಲಿ ಕೈಗೆ ಗೆಲುವಂತೆ!

0
1536
Close up of male hand putting vote into a balot box

ಡಿಸೆಂಬರ್ ಏಳನೆ ತಾರಿಖಿನಂದು ಸಿವೋಟರ್ ಎಕ್ಸಿಟ್ ಪೋಲ್ ಸಮೀಕ್ಷೆ ನಡೆಸಿದ್ದು ಸಮೀಕ್ಷೆಯ ಪ್ರಕಾರ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ಗಢ ಕಾಂಗ್ರೇಸ್ ಜಯದ ಪತಾಕೆ ಹೂಡಲಿದೆ ಎಂದು ವರದಿ ಮಾಡಿದೆ.

ಸಿವೋಟರ್ ಮಧ್ಯಪ್ರದೇಶದ ತನ್ನ ಸಮೀಕ್ಷೆಯಲ್ಲಿ ಭಾ.ಜ.ಪಾ 98 ಹಾಗೂ ಕಾಂಗ್ರೇಸ್ 118 ಸ್ಥಾನಗಳನ್ನ ಪಡೆಯಲಿದೆ ಎಂದು ವರದಿ ಮಾಡಿದೆ, ಸಿ.ಎನ್.ಎಕ್ಸ್ ಸಮೀಕ್ಷೆ ಬಿ.ಜೆ.ಪಿ ಗೆಲುವನ್ನ ಸಾಧಿಸಲಿದೆ ಎಂದು ವರದಿ ಮಾಡಿದ್ದು ಸಿ.ಎನ್ ಎಕ್ಸ್ ವರದಿ ಪ್ರಕಾರ ಬಿ.ಜೆ.ಪಿ ಸುಮಾರು 126 ಸೀಟುಗಳನ್ನ ಗೆಲ್ಲಲಿದ್ದು ಕಾಂಗ್ರೇಸ್ 89 ಸೀಟುಗಳಲ್ಲಿ ತೃಪ್ತಿ ಪಡಲಿದೆ ಎನ್ನಲಾಗಿತ್ತು.

ಛತ್ತೀಸ್ಗಢದ ಸಮೀಕ್ಷೆಯಲ್ಲೂ ಸಿವೋಟರ್, ಟುಡೆಸ್ ಚಾಣಕ್ಯ, ಎಕ್ಸೆಸ್ ಮೈ ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೇಸ್ ಗೆಲುವು ಬಹುತೇಕ ಖಚಿತ ಎನ್ನಲಾಗುತ್ತಿದೆ.

ರಾಜಸ್ಥಾನದಲ್ಲಿ ಭಾ.ಜ.ಪಾ ಸುಮಾರು ಅರವತ್ತರಿಂದ ಎಂಬತ್ತಮೂರು ಸೀಟುಗಳನ್ನ ಗೆಲ್ಲಲಿದೆ ಎಂದು ಊಹಿಸಲಾಗಿದ್ದು ಎಲ್ಲ ಸಮೀಕ್ಷೆಯಲ್ಲೂ ಕಾಂಗ್ರೇಸ್ಗೆ ರಾಜಸ್ಥಾನದಲ್ಲಿ ಬಹುತೇಕ ಗೆಲುವೆಂದು ಹೇಳಲಾಗುತ್ತಿದೆ.

ತೆಲಂಗಾಣದಲ್ಲಿ ಪ್ರಾದೇಶಿಕ ಪಕ್ಷವಾದ ತೆಲಂಗಾಣ ರಾಷ್ಟ್ರೀಯ ಸಮಿತಿ ಭರ್ಜರಿ ಜಯ ಗಳಿಸಲಿದೆ ಎನ್ನಲಾಗುತ್ತಿದ್ದು, ಕಾಂಗ್ರೆಸ್ ನೆಕ್ ಟು ನೆಕ್ ಫೈಟ್ ಕೊಡಲಿದೆಯೆಂದು ವರದಿ ಮೂಲಕ ತಿಳಿದು ಬಂದಿದೆ.

Advertisement

LEAVE A REPLY

Please enter your comment!
Please enter your name here