ಸಿಹಿಕುಂಬಳಕಾಯಿ ಸೂಪ್‌

0
540

 
ವಾರ್ತೆ ರೆಸಿಪಿ
ಬೇಕಾಗುವ  ಸಾಮಗ್ರಿ:
ಒಂದು ಚಿಕ್ಕ ಸಿಹಿ ಕುಂಬಳಕಾಯಿ, ಒಂದು ದೊಡ್ಡ ಟೊಮೆಟೊ, ಎರಡು ಗಜ್ಜರಿ (ಕ್ಯಾರೆಟ್‌), ಒಂದು ಚಮಚ ತುಪ್ಪ, ಒಂದು ಚಮಚ ಕಾಳುಮೆಣಸಿನ ಪುಡಿ, ಒಂದು ಕಪ್‌ ನೀರು, ರುಚಿಗೆ ಉಪ್ಪು, ಅರ್ಧ ಚಮಚ ಸಕ್ಕರೆ.
 
 
 
ತಯಾರಿಸುವ ವಿಧಾನ:
ಪ್ಯಾನ್‌ಗೆ ತುಪ್ಪ ಹಾಕಿ. ಅದರಲ್ಲಿ ಕತ್ತರಿಸಿದ ಕುಂಬಳಕಾಯಿ,ಗಜ್ಜರಿ ಮತ್ತು ಟೊಮೆಟೊ ಹಾಕಿ ಸೌಟಿನಿಂದ ಅಲ್ಲಾಡಿಸುತ್ತಿರಿ. ಅದಕ್ಕೆ ನೀರು ಹಾಕಿ ಕುದಿಸಿ. ಚೆನ್ನಾಗಿ ಕುದಿ ಬಂದ ನಂತರ ಉಪ್ಪು ಮತ್ತು ಸಕ್ಕರೆ ಹಾಕಿ ತಣ್ಣಗಾಗಲು ಬಿಡಿ. ಈ ಮಿಶ್ರಣವನ್ನು ಮಿಕ್ಸಿಯಲ್ಲಿ ರುಬ್ಬಿ.  ರುಬ್ಬುವಾಗ ಅಗತ್ಯ ಎನಿಸಿದರೆ ನೀರು ಹಾಕಿ. ಇದಕ್ಕೆ ಕಾಳುಮೆಣಸಿನ ಪುಡಿಯನ್ನು ಉದುರಿಸಿ ಸವಿಯಿರಿ.

LEAVE A REPLY

Please enter your comment!
Please enter your name here