ಸಿಲಿಂಡರ್ ಸ್ಫೋಟ

0
136

ತುಮಕೂರು ಪ್ರತಿನಿಧಿ ವರದಿ
ಓಮ್ನಿಗೆ ಗ್ಯಾಸ್ ತುಂಬುವ ವೇಳೆ ಸಿಲಿಂಡರ್ ಸ್ಫೋಟಗೊಂಡ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದ ಬೆಸ್ಕಾಂ ವಸತಿಗೃಹದ ಬಳಿ ಸಂಭವಿಸಿದೆ.
 
 
ಘಟನೆಯಲ್ಲಿ ಓಮ್ನಿ, ಆಟೋ ಸೇರಿ ಪಕ್ಕದ ಮನೆಯಲ್ಲಿದ್ದ ವಸ್ತುಗಳು ಭಸ್ಮವಾಗಿದೆ. ಎಲ್ ಪಿಜಿ ಸಿಲಿಂಡರ್ ನಿಂದ ಓಮ್ನಿಗೆ ಗ್ಯಾಸ್ ತುಂಬಿಸುತ್ತಿದ್ದರು.
 
 
ಓಮ್ನಿಯು ಬೆಸ್ಕಾಂ ನೌಕರ ರಾಮಸ್ವಾಮಿ ಎಂಬುವವರಿಗೆ ಸೇರಿದ್ದಾಗಿದೆ. ಹರೀಶ್ ಎಂಬುವವರಿಗೆ ಆಟೋ ಸೇರಿದ್ದಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here