ಸಿಯಾ ವಾಮನಸಾಗೆ ಶೌರ್ಯ ಪುರಸ್ಕಾರ

0
305

ರಾಷ್ಟ್ರೀಯ ಪ್ರತಿನಿಧಿ ವರದಿ
ಸಿಯಾ ವಾಮನಸಾ ಖೋಡೆಗೆ ರಾಷ್ಟ್ರೀಯ ಶೌರ್ಯ ಪುರಸ್ಕಾರ ಲಭಿಸಿದೆ. ಹುಬ್ಬಳ್ಳಿ ನಗರದ ನಿವಾಸಿ ಸಿಯಾ ವಾಮನಸಾ ಖೋಡೆಗೆ ಗಣರಾಜ್ಯೋತ್ಸವ ಪ್ರಯುಕ್ತ ನೀಡಲಾಗುವ ಶೌರ್ಯ ಪ್ರಶಸ್ತಿ ದೊರಕಿದೆ.
 
 
 
ಜ.26ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಸಿಯಾ ವಾಮನಸಾ 4 ವರ್ಷದ ಸಹೋದರನ ಪ್ರಾಣ ರಕ್ಷಿಸಿದ್ದಳು. ಸಹೋದರನಿಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿತ್ತು. ಈ ಸಂದರ್ಭದಲ್ಲಿ ಸಿಯಾ ಚಾಣಾಕ್ಷತನದಿಂದ ಸೋದರನನ್ನು ರಕ್ಷಿಸಿದ್ದಳು. ಹುಬ್ಬಳ್ಳಿ ನಗರದಲ್ಲಿರುವ ನಿವಾಸದ ಮೇಲೆ ಅವಘಡ ನಡೆದಿತ್ತು.
 
 
 
ಈ ಘಟನೆ 2014ರ ಎಪ್ರಿಲ್ 15ರಂದು ನಡೆದಿತ್ತು. ಘಟನೆ ನಡೆದಾಗ ಸಿಯಾಗೆ 10 ವರ್ಷವಾಗಿತ್ತು. ಇಲ್ಲಿನ ದಾಜಿಬಾನ್ ಪೇಟೆಯ ಹರಪನಹಳ್ಳಿ ಓಣಿಯ ವಾಮನಸಾ ಯಲ್ಲಪ್ಪ ಮತ್ತು ವಿಜಯಶ್ರೀ ದಂಪತಿಯ ಪುತ್ರಿಯಾಗಿದ್ದಾಳೆ.

LEAVE A REPLY

Please enter your comment!
Please enter your name here