ಸಿಬಿಐ ನಿರ್ದೇಶಕರಾಗಿ ಅಲೋಕ್ ಕುಮಾರ್ ವರ್ಮಾ ಆಯ್ಕೆ

0
220

ರಾಷ್ಟ್ರೀಯ ಪ್ರತಿನಿಧಿ ವರದಿ
ಹಿರಿಯ ಐ.ಪಿ.ಎಸ್. ಅಧಿಕಾರಿ ಅಲೋಕ್ ವರ್ಮಾ ಅವರು ಕೇಂದ್ರಿಯಾ ತನಿಖಾ ಸಂಸ್ಥೆ ‘ಸಿ.ಬಿ.ಐ.’ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಪ್ರಸ್ತುತ ದೆಹಲಿ ಪೊಲೀಸ್ ಆಯುಕ್ತರಾಗಿರುವ ವರ್ಮ 2 ವರ್ಷಗಳ ಕಾಲ ಸಿ.ಬಿ.ಐ. ಮುಖ್ಯಸ್ಥರಾಗಿದ್ದಾರೆ.
 
 
 
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ, ಮುಖ್ಯ ನ್ಯಾಯಮೂರ್ತಿ ಜೆ ಎಸ್ ಖೇಹರ್ ಮತ್ತು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸದಸ್ಯರಾಗಿರುವ ಮೂವರ ಸದಸ್ಯರ ಆಯ್ಕೆ ಸಮಿತಿಯು ಸಿಬಿಐ ನಿರ್ದೇಶಕ ಹುದ್ದೆಗೆ ಅಲೋಕ್ ಕುಮಾರ್ ವರ್ಮಾರನ್ನು ಆಯ್ಕೆ ಮಾಡಿದೆ.
 
 
ಹಿರಿಯ ಐ.ಪಿ.ಎಸ್. ಅಧಿಕಾರಿಯಾಗಿರುವ ವರ್ಮ ಅಂಡಮಾನ್ ನಿಕೋಬಾರ್, ಪಾಂಡಿಚೇರಿ ಡಿ.ಜಿ.ಪಿ.ಯಾಗಿ ಕಾರ್ಯನಿರ್ವಹಿಸಿದ್ದು, ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳಲ್ಲಿ ವಿವಿಧೆಡೆ ಕೆಲಸ ಮಾಡಿದ್ದಾರೆ. ಈಗ ಸಿ.ಬಿ.ಐ. ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಹುದ್ದೆಗೆ ಆಯ್ಕೆಯಾಗಲಿದ್ದಾರೆ ಎನ್ನಲಾಗಿದ್ದ ಆರ್.ಕೆ. ದತ್ತಾ ಅವರಿಗೆ ಅವಕಾಶ ತಪ್ಪಿದೆ.

LEAVE A REPLY

Please enter your comment!
Please enter your name here