ಸಿನಿಮೀಯ ರೀತಿಯಲ್ಲಿ ಕಳ್ಳರ ದುಷ್ಕೃತ್ಯ

0
615

ಬೆಂಗಳೂರು ಪ್ರತಿನಿಧಿ ವರದಿ
ಬೆಂಗಳೂರಿನಲ್ಲಿ ಸಿನಿಮೀಯ ರೀತಿಯಲ್ಲಿ ಕಳ್ಳರ ದುಷ್ಕೃತ್ಯ ನಡೆದಿದೆ. ಪೊಲೀಸರ ಸೋಗಿನಲ್ಲಿ ಫೈನಾನ್ಸ್ ಮ್ಯಾನೇಜರ್ ಕಿಡ್ನಾಪ್ ಮಾಡಿದ ಘಟನೆ ನಗರದ ಕೆಂಗೇರಿ ರಿಂಗ್ ರಸ್ತೆಯಲ್ಲಿರುವ ಮುತ್ತೂಟ್ ಮಿನಿಗೋಲ್ಡ್ ಲೋನ್ ಕಚೇರಿಯಲ್ಲಿ ನಡೆದಿದೆ.
 
 
 
ದರೋಡೆಕೋರರು ಮ್ಯಾನೇಜರ್ ನ್ನು ತಡರಾತ್ರಿ ಕಚೇರಿಗೆ ಕರೆತಂದು ಲಕ್ಷಾಂತರ ರೂ.ಗಳನ್ನು ದರೋಡೆ ಮಾಡಿದ್ದಾರೆ. 90 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದಾರೆ. ಇನ್ನೋವಾ ಕಾರಿನಲ್ಲಿ ಬಂದಿದ್ದ ಖದೀಮರ ತಂಡ ಈ ಕೃತ್ಯ ಎಸಗಿದೆ. ಈ ತಂಡ ದರೋಡೆ ನಂತರ ಫೈನಾನ್ಸ್ ಮ್ಯಾನೇಜರ್ ನನ್ನು ಬಿಟ್ಟು ಪರಾರಿಯಾಗಿದ್ದಾರೆ.
 
 
ಬಳಿಕ ಮ್ಯಾನೇಜರ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here