ಸಿದ್ಧ ಉತ್ತರದತ್ತ ಚಿತ್ತ

0
203

ಬೆಂಗಳೂರು ಪ್ರತಿನಿಧಿ ವರದಿ
ಡಿ.ವೈ.ಎಸ್.ಪಿ ಗಣಪತಿ ಆತ್ಮಹತ್ಯೆ ಪ್ರಕರಣ ತೀವ್ರಗೊಳ್ಳುತ್ತಿದೆ. ವಿಪಕ್ಷಗಳು ಪ್ರಕರಣವನ್ನು ಪ್ರಕೋಪಕ್ಕೆ ತೆಗೆದುಕೊಂಡು ಹೋಗುವ ಸ್ಪಷ್ಟ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಅವರ ತಲೆದಂಡಕ್ಕೆ ಒತ್ತಡ ಹೆಚ್ಚುತ್ತಿದೆ. ಕಾಂಗ್ರೆಸ್‌ನ ಒಳಗೂ, ಜಾರ್ಜ್ ಆಪ್ತರೂ ರಾಜೀನಾಮೆಗೆ ಒತ್ತಾಯಿಸುವ ಮಾಹಿತಿ ವಾರ್ತೆ.ಕಾಂ ಲಭಿಸಿದೆ. ಏತನ್ಮಧ್ಯೆ ವಿಧಾನ ಸೌಧದ ಮೂರನೇ ಮಹಡಿಯಲ್ಲಿ ಸಿ.ಎಂ.ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರ ಸಭೆ ನಡೆಯುತ್ತಿದೆ. ಮುಖ್ಯಮಂತ್ರಿಗಳು ಸದನದಲ್ಲಿ ಸಮರ್ಥ ಉತ್ತರವನ್ನು ಇಂದು ನೀಡಬೇಕಾಗಿದ್ದು ಇದು ಅಳಿವು ಉಳಿವಿನ ಪ್ರಶ್ನೆಯಂತೆ ಗೋಚರವಾಗುತ್ತಿದೆ. ಸಿಎಂ ಅವರ ಉತ್ತರದ ಮೇಲೆ ಎಲ್ಲರ ದೃಷ್ಠಿ ಇಂದಿದೆ. ಇಂದು ಜಾರ್ಜ್ ಅವರ ಪರವಾಗಿ ಸರಕಾರ ನಿಂತದ್ದೇ ಆದಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದೊಡ್ಡ ಹೊಡೆತವನ್ನು ಅನುಭವಿಸುವ ಸಾಧ್ಯವಿದೆ ಎಂಬ ಲೆಕ್ಕಾಚಾರಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಜಾರ್ಜ ಅವರು ಹೈಕಮಾಂಡ್ ನಲ್ಲಿ ಪ್ರಭಾವ ಹೊಂದಿರುವ ಹಿನ್ನಲೆಯಲ್ಲಿ ಪ್ರತಿಯೊಂದು ನಡೆಯೂ ಕುತೂಹಲ ಮೂಡಿಸುತ್ತಿದೆ.

LEAVE A REPLY

Please enter your comment!
Please enter your name here