ಸಿದ್ದು ಬಜೆಟ್-2017

0
397

ಬೆಂಗಳೂರು ಪ್ರತಿನಿಧಿ ವರದಿ
2017-18ನೇ ಸಾಲಿನ ರಾಜ್ಯ ಮಂಡನೆ ಶುರುವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಆರಂಭಿಸಿದ್ದಾರೆ. 1,86,561 ಕೋಟಿ ರೂಪಾಯಿಗಳ ಬಜೆಟ್ ಮಂಡನೆಯಾಗಿದೆ.
ಸಿದ್ದು ಲೆಕ್ಕಾಚಾರದ ಪ್ರಮುಖಾಂಶಗಳು:
* ಪ್ರಸಕ್ತ ಸಾಲಿನ ಬಜೆಟ್ ನಲ್ಲಿ 21 ಜಿಲ್ಲೆಗಳಲ್ಲಿ 49 ಹೊಸ ತಾಲೂಕುಗಳ ಘೋಷಣೆಯಾಗಿದೆ. ಬಾಗಲಕೋಟೆಯ ಗುಳೇದ ಗುಡ್ಡ, ರಬಕವಿ-ಬನಹಟ್ಟಿ, ದಾವಣಗೆರೆ ಜಿಲ್ಲೆಯ ನ್ಯಾಮತಿ, ಬೀದರ್ ನ ಚಿಟಗುಪ್ಪ, ಹುಲಸೂರು, ಕಮಲಾನಗರ, ಬೆಳಗಾವಿಯ ನಿಪ್ಪಾಣಿ, ಮೂಡಲಗಿ ಹಾಗೂ ಕಾಗವಾಡ, ಬಳ್ಳಾರಿ ಜಿಲ್ಲೆಯ ಕುರುಗೋಡು-ಕೆಟ್ಟೂರು-ಕಂಪ್ಲಿ, ಧಾರವಾಡ ಜಿಲ್ಲೆಯ ಅಣ್ಣಿಗೇರಿ, ಆಳ್ನಾವರ ಮತ್ತು ಹುಬ್ಬಳ್ಳಿನಗರ, ಗದಗ ಜಿಲ್ಲೆಯ ಗಜೇಂದ್ರ ಹಾಗೂ ಲಕ್ಷ್ಮೇಶ್ವರ, ಉಡುಪಿಯ ಬೈಂದೂಡು-ಬ್ರಹ್ಮಾವರ-ಕಾಪು, ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದಿರೆ-ಕಡಬ, ಕಲಬುರಗಿ ಜಿಲ್ಲೆ ಕಾಳಗಿ-ಕಮಲಾಪುರ-ಯಡ್ರಾವಿ-ಶಹಾಬಾದ್, ಉತ್ತರಕನ್ನಡದ ದಾಂಡೇಲಿ, ಯಾದಗಿರಿ ಜಿಲ್ಲೆಯ ಹುಣಸಗಿ, ವಸಗೆರಮತ್ತು ಗುರುಮಿಟ್ಕಲ್, ಕೊಪ್ಪಳ ಜಿಲ್ಲೆಯ ಕುಕನೂರು-ಕನಕಗಿರಿ-ಕಾರಟಗಿ, ರಾಯಚೂರು ಜಿಲ್ಲೆಯ ಮಸ್ಕಿ-ಸಿರವಾರ,
* ವೃದ್ಧಾಶ್ರಮ, ಅಂಧಮಕ್ಕಳ ಶಾಲೆ, ಭಿಕ್ಷುಕರ ಕೇಂದ್ರಕ್ಕೆ ಅನ್ನಭಾಗ್ಯದಡಿ ಆಹಾರ ಧಾನ್ಯ
* ರಾಜ್ಯವನ್ನು ಸೀಮೆಎಣ್ಣೆ ಮುಕ್ತ ಮಾಡಲು ಅನಿಲ ಭಾಗ್ಯ ಯೋಜನೆ
* ಅನ್ನಭಾಗ್ಯ ಅಕ್ಕಿ 5 ಕೆಜಿಯಿಂದ 7 ಕೆಜಿಗೆ ಏರಿಕೆ ಮಾಡಲಾಗಿದೆ.
* ಅಮ್ಮಾ ಕ್ಯಾಂಟೀನ್ ಮಾದರಿಯಲ್ಲಿ ಬೆಂಗಳೂರಿನಲ್ಲಿ ಪ್ರತಿ ವಾರ್ಡಿಗೆ ಒಂದರಂತೆ 198 ನಮ್ಮ ಕ್ಯಾಂಟೀನ್ ಆರಂಭವಾಗಲಿದೆ. 5ರೂ.ಗೆ ತಿಂಡಿ, 10 ರೂ.ಗೆ ಊಟ ನೀಡುವ ನಮ್ಮ ಕ್ಯಾಂಟೀನ್ ಯೋಜನೆಯಾಗಿದೆ. ನಮ್ಮ ಕ್ಯಾಂಟೀನ್ ಗಾಗಿ 100 ಕೋಟಿ ರೂ, ಅನುದಾನ ಇಡಲಾಗಿದೆ.
* 6 ಹೊಸ ಮೆಡಿಕಲ್ಸ್ ಕಾಲೇಜು, 5 ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯಾಗಲಿದೆ.
* ರೈತರ ಸಾಲ ಮನ್ನಾ ಇಲ್ಲ. 31-03-2017ರವರೆಗೆ ಸಾಲ ಮರುಪಾವತಿ ಅವಧಿ ವಿಸ್ತರಣೆಯಾಗಿದೆ. ಶೇ.3ರ ಬಡ್ಡಿದರದಲ್ಲಿ 10 ಲಕ್ಷ ರೂಪಾಯಿ ಕೃಷಿ ಸಾಲ ನೀಡಲಾಗುವುದು. 25 ಲಕ್ಷ ರೈತರಿಗೆ 13,500 ಕೋಟಿ ಕೃಷಿ ಸಾಲ ನೀಡುವ ಗುರಿ ಹೊಂದಿದೆ.
* ಕ್ಷೀರ ಭಾಗ್ಯ ಯೋಜನೆಯಡಿ ವಾರದಲ್ಲಿ 5 ದಿನ ಹಾಲು ವಿತರಣೆ ಮತ್ತು ಅಂಗನವಾಡಿ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ ವಿತರಣೆಯಾಗಲಿದೆ.
* ಲೈಂಗಿಕ ದೌರ್ಹನ್ಯಕ್ಕೊಳಗಾದ ಮಹಿಳೆಯರಿಗೆ 145 ಚಿಕಿತ್ಸಾ ಘಟಕ ಸ್ಥಾಪನೆಯಾಲಿದೆ.
* ಪೌಷ್ಠಿಕಾಂಶ ಕೊರತೆಗೆ ಮಾತೃಭಾಗ್ಯ ಯೋಜನೆ-ಗರ್ಭಿಣಿ ಮತ್ತು ಬಾಣಂತಿಯರಿಗೆ ಬಿಸಿಯೂಟ
* 12 ಲಕ್ಷ ಮಹಿಳೆಯರಿಗೆ ಮಧ್ಯಾಹ್ನ ಬಿಸಿಯೂಟ
* ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 5 ನಿವೇಶನ ಸ್ಥಾಪನೆಯಾಗಲಿದೆ. 2017-18ರಲ್ಲಿ 3 ಸಾವಿರ ಪ್ಲ್ಯಾಟ್ ಗಳ ನಿರ್ಮಾಣವಾಗಲಿದೆ.
* ಪ್ರತಿ ಗ್ರಾಮ ಪಂಚಾಯತ್ ನಲ್ಲಿ ಪ್ರಾಥಮಿಕ ಕೃಷಿ ಸಹಕಾರ ಸಂಘ ಸ್ಥಾಪನೆಯಾಗಲಿದೆ.
* ಆತ್ಮಹತ್ಯೆ ಮಾಡಿಕೊಂಡ ರೈತ ಪತ್ನಿಗೆ 2 ಸಾವಿರ ಪಿಂಚಣಿ ಜಾರಿ
* ಗ್ರಾಮೀಣ ಪ್ರದೇಶದಲ್ಲಿ 2500 ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಾಗಲಿದೆ.
* ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸ್ತ್ರೀ ಶಕ್ತಿ ಒಕ್ಕೂಟಗಳ ಮೂಲಕ ಸವಿರುಚಿ ಸಂಚಾರಿ ಕ್ಯಾಂಟೀನ್ ಆರಂಭವಾಗಲಿದೆ.
* ಮಾರುಕಟ್ಟೆಗಳಿಗೆ ಕ್ರೇಟ್, ಟ್ರಾಲಿ ಎಲೆಕ್ಟ್ರಾನಿಕ್ ತೂಕ ಯಂತ್ರ ಖರೀದಿ
* ಬೆಂಗಳೂರಿನಲ್ಲಿ ಉಪನಗರ ರೈಲ್ವೆ ಯೋಜಜೆ ಜಾರಿ
* ಗದಗದಲ್ಲಿ ಈರುಳ್ಳಿ ಗೋದಾಮು ಸ್ಥಾಪನೆಗೆ 5 ಕೋಟಿ ರೂ. ಮಂಜೂರು
* ಖಾಸಗಿ ಸಂಸ್ಥೆಗಳಲ್ಲಿ ಎಸ್ ಸಿ-ಎಸ್ ಟಿ ಕಾರ್ಮಿಕರಿಗೆ ಉದ್ಯೋಗ
* ಬೆಂಗಳೂರು ಒನ್ ಮಾದರಿಯಲ್ಲಿ ಕರ್ನಾಟಕ ಒನ್- ರಾಜ್ಯದ 9 ಜಿಲ್ಲೆಗಳಲ್ಲಿ ಕರ್ನಾಟಕ ಒನ್ ಕೇಂದ್ರ ಆರಂಭವಾಗಲಿದೆ.
* ಮದ್ಯದ ಮೇಲೆ ಹೆಚ್ಚುವರಿ ಅಬಕಾರಿ ಸುಂಕ-ಬಿಯರ್, ಫೆನ್ನಿ, ಲಿಕ್ಕರ್, ವೈನ್ ಮೌಲ್ಯವರ್ಧಿತ ತೆರಿಗೆ ರದ್ದು
*8-10ನೇ ತರಗತಿ ವಿದ್ಯಾರ್ಥಿನಿಯರಿಗೆ ಚೂಡಿದಾರ್ ಸಮವಸ್ತ್ರ
* ರಾಜ್ಯದಲ್ಲಿ ಹೊಸದಾಗಿ 176 ಸಂಯೋಜಿತ ಕಾಲೇಜುಗಳ ಸ್ಥಾಪನೆ
* ಕನ್ನಡ ಚಿತ್ರೋದ್ಯಮ ಅಭಿವೃದ್ಧಿಗೆ ಮೈಸೂರಿನ ಹಿಮ್ಮಾವು ಗ್ರಾಮದಲ್ಲಿ ಚಿತ್ರನಗರಿ ಸ್ಥಾಪನೆ
* ಕರಾವಳಿ ಭಾಗದಲ್ಲಿ ಪಶ್ಚಿಮ ವಾಹಿನಿ ಯೋಜನೆ ಜಾರಿ
* ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕಕ್ಕೆ 175 ಕೋಟಿ ರೂ.
* ವಿಶ್ವ ಕನ್ನಡ ಸಮ್ಮೇಳನ ಆಯೋಜನೆಗೆ 20 ಕೋಟಿ ರೂಪಾಯಿ
* ರಾಜ್ಯದ ಎಲ್ಲಾ ಗ್ರಾ.ಪಂ.ಗಳಲ್ಲಿ ಉಚಿತ ವೈಫೈ ಸೇವೆ
* ರಾಜ್ಯದ ಬರ ಪೀಡಿತ ಪ್ರದೇಶಗಳಲ್ಲಿ ಮೋಡ ಬಿತ್ತನೆ-30 ಕೋಟಿ ರೂ.ವೆಚ್ಚ
* ಹನಿ ನೀರಾವರಿ ಅಳವಡಿಸಿಕೊಳ್ಳುವ ರೈತರಿಗೆ ಶೇ.90ರಷ್ಟು ಸಬ್ಸಿಡಿ
* ನೀರಿನ ಟ್ಯಾಂಕರ್ ಖರೀದಿಸುವ ರೈತರಿಗೆ 50 ಸಾವಿರ ರೂ. ಸಹಾಯಧನ
* 2 ಸ್ಟ್ರೋಕ್ ಆಟೋಗಳ ರದ್ದತಿಗೆ ಕ್ರಮ
* ಅಪಘಾತದಲ್ಲಿ ಹಸು ಎತ್ತು ಸಾವನ್ನಪ್ಪಿದರೆ 10 ಸಾವಿರ ಪರಿಹಾರ
* ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ 7ನೇ ವೇತನ ಆಯೋಗ ರಚನೆ
* ರಾಜ್ಯದ ಪ್ರತೀ ಮಾಂಸದಂಗಡಿಗೆ 1.25 ಲಕ್ಷ ಸಹಾಯ ಧನ
* 10 ಸಾವಿರ ಉತ್ಕೃಷ್ಟ ಟಗರು ಉತ್ಪಾದನಾ ಘಡಕ ಸ್ಥಾಪನೆ
*ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ 10 ಕೋಟಿ ಅನುದಾನ
* ಉಡುಪಿಯಲ್ಲಿ ಈಜು, ಮೈಸೂರಿನಲ್ಲಿ ಟೆನಿಸ್,
* ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಕ್ರಮ
* ರಾಜ್ಯದಲ್ಲಿ ಹೊಸದಾಗಿ 480 ಗ್ರಾಮ ಪಂಚಾಯತ್ ಗಳ ಸ್ಥಾಪನೆ
* ಜಿ.ಪಂ., ತಾ.ಪಂ. ಮತ್ತು ಗ್ರಾಮ.ಪಂ. ಸದಸ್ಯರ ಗೌರವಧನ ಹೆಚ್ಚಳ
* ಜಿ.ಪಂ. ಸದಸ್ಯರ ಗೌರವಧನ-5 ಸಾವಿರ ರೂ,ಗೆ ಏರಿಕೆ, ತಾ,ಪಂ. ಅಧ್ಯಕ್ಷರ ಗೌರವಧನ-6 ಸಾವಿರ ರೂ.ಗೆ ಏರಿಕೆ
* ತಾ.ಪಂ. ಉಪಾಧ್ಯಕ್ಷರ ಗೌರವಧನ-4 ಸಾವಿರ ರೂ,ಗೆ ಏರಿಕೆಯಾಗಿದೆ.
* ತಾ.ಪಂ. ಸದಸ್ಯರ ಗೌರವಧನ-3ಸಾವಿರ ರೂ.ಗೆ ಏರಿಕೆ
* ಗ್ರಾ.ಪಂ. ಅಧ್ಯಕ್ಷರ ಗೌರವಧನ -3 ಸಾವಿರ ರೂ.ಗೆ ಏರಿಕೆ
* ಗ್ರಾ.ಪಂ. ಸದಸ್ಯರ ಗೌರವಧನ- ಸಾವಿರ ರೂ.ಗೆ ಏರಿಕೆಯಾಗಿದೆ.
* ಗ್ರಾ.ಪಂ. ಉಪಾಧ್ಯಕ್ಷರ ಗೌರವಧನ-2 ಸಾವಿರ ರೂ.ಗೆ ಏರಿಕೆ
* ನಿವೃತ್ತ ಪತ್ರಕರ್ತರ ಮಾಸಾಶನ ಹೆಚ್ಚಳವಾಗಿದೆ. 8 ಸಾವಿರರೂ.ನಿಂದ 10 ಸಾವಿರಕ್ಕೆ ಮಾಸಾಶನ ಏರಿಕೆ, ಜಿಲ್ಲಾ ಕೆಂದ್ರಗಳಲ್ಲಿನ ಪತ್ರಕರ್ತರಿಗೆ ಬಸ್ ಪಾಸ್
* ಆಶಾ ಕಾರ್ಯಕರ್ತರಿಗೆ 1000 ಗೌರವ ಧನ
* ಮೋಟಾರು ವಾಹನ ಶುಲ್ಕದಲ್ಲಿ ಭಾರೀ ಏರಿಕೆ-ಟೂ ವ್ಹೀಲರ್-ಲೈಫ್ ಟೈಂ ಟ್ಯಾಕ್ಸ್ ಏರಿಕೆ
* ಗ್ರಾಮಗಳಲ್ಲಿ 150 ಆರೋಗ್ಯ ಚಿಕಿತ್ಸಾಲಯ ಸ್ಥಾಪನೆ
* 40 ಹೊಸ ವಿದ್ಯುತ್ ಉಪಕೇಂದ್ರಗಳ ಸ್ಥಾಪನೆ
* ಉಚಿತ ವಿದ್ಯುತ್ 18 ಯೂನಿಟ್ ನಿಂದ ಯೂನಿಟ್ ಗೆ ಏರಿಕೆ
* ಬನವಾಸಿ, ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರಗಳಿಗೆ ತಲಾ 5 ಕೋಟಿ
* ಶಬರಿಮಲೆಯಲ್ಲಿ ಕರ್ನಾಟಕದ ಉಪಕಚೇರಿ- ಯಾತ್ರಾರ್ಥಿಗಳ ಅನುಕೂಲಕ್ಕಾಗಿ- ವೈದ್ಯಕೀಯ ಸೇವೆಗಾಗಿ-ಸಹಾಯವಾಗಿ-ರಕ್ಷಣೆ ಕ್ರಮಕ್ಕಾಗಿ

LEAVE A REPLY

Please enter your comment!
Please enter your name here