ಸಿಡಿದಿದ್ದ ಪನ್ನೀರ್

0
183

ಚೆನ್ನೈ ಪ್ರತಿನಿಧಿ ವರದಿ
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಬಳಿ ಓ ಪನ್ನೀರ್ ಸೆಲ್ವಂ ಅವರು ಶಶಿಕಲಾ ನಟರಾಜನ್ ವಿರುದ್ಧ ತಿರುಗಿಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಶಶಿಕಲಾ ನಟರಾಜನ್ ಎಐಎಡಿಎಂಕೆ ಶಾಸಕರ ಸಭೆ ಕರೆದಿದ್ದಾರೆ.
 
ಚಿನ್ನಮ್ಮ ನೇತೃತ್ವದ ಶಾಸಕರ ಸಭೆ ಇಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಚೆನ್ನೈ ಪೋಯೆಸ್ ಗಾರ್ಡನ್ ನಿವಾಸದಲ್ಲಿ ಶಾಸಕರ ಮಹತ್ವದ ಸಭೆ ನಡೆಯಲಿದೆ.
 
 
134 ಶಾಸಕರು ನಮ್ಮ ಜೊತೆಗಿದ್ದಾರೆಂದು ಶಶಿಕಲಾ ಬೆಂಬಲಿಗರು ಹೇಳಿದ್ದಾರೆ. ಸಭೆಯಲ್ಲಿ ಶಾಸಕರ ಹಾಜರಾತಿ ಮೇಲೆ ಮಹತ್ವದ ನಿರ್ಧಾರ ಕೈಗೊಳ್ಳಲಾಗುವುದು. ಸಭೆಯಲ್ಲಿ ಪನ್ನೀರ್ ಸೆಲ್ವಂ ವಿರುದ್ಧ ಕ್ರಮಕೈಗೊಳ್ಳುವ ಸಾಧ್ಯತೆ ಇದೆ. ಎಐಎಡಿಎಂಕೆ ಖಜಾಂಚಿ ಸ್ಥಾನದಿಂದ ಪನ್ನೀರ್ ವಜಾಗೊಳಿಸುವಂತೆ ಶಶಿಕಲಾ ಘೋಷಣೆ ಮಾಡಿದ್ದಾರೆ. ಪಕ್ಷದ ನೂತನ ಖಜಾಂಚಿಯಾಗಿ ಡಿ.ಶ್ರೀನಿವಾಸನ್ ಆಯ್ಕೆಯಾಗಿದ್ದಾರೆ. ಶಶಿಕಲಾ ನಟರಾಜನ್ ವಿರುದ್ಧ ಬಂಡಾಯ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳಲಾಗಿದೆ.
 
 
ಶಶಿಕಲಾ ವಿರದ್ಧ ಬಾಂಬ್ ಸಿಡಿಸಿದ ಸೆಲ್ವ!
ಒತ್ತಡಕ್ಕೆ ಮಣಿದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ಧೇನೆ ಎಂದು ತಮಿಳುನಾಡು ಜನತೆ ಎದುರು ಪನ್ನೀರ್ ಸೆಲ್ವಂ ಸತ್ಯ ಬಿಚ್ಚಿಟ್ಟಿದ್ದಾರೆ. ಅಮ್ಮಾ ಆತ್ಮ ಸತ್ಯ ಹೇಳುವಂತೆ ಸಂದೇಶ ನೀಡಿತ್ತು ಎಂದು ಓ ಪನ್ನೀರ್ ಸೆಲ್ವ ಅವರು ಚೆನ್ನೈನಲ್ಲಿ ಜಯಲಲಿತಾ ಸಮಾಧಿ ಬಳಿ ಹೇಳಿದ್ದಾರೆ. ಜಯಲಲಿತಾ ಸಮಾಧಿ ಬಳಿ ಪನ್ನೀರ್ ಕಣ್ಣೀರಿಟ್ಟಿದ್ದಾರೆ.

LEAVE A REPLY

Please enter your comment!
Please enter your name here