ಸಿಕ್ಕಿಬಿದ್ದ ಖದೀಮನ ಪತ್ನಿ

0
396

ಬೆಂಗಳೂರು ಪ್ರತಿನಿಧಿ ವರದಿ
ಬೆಂಗಳೂರಿನಲ್ಲಿ ಬ್ಯಾಂಕ್ ಹಣದ ವಾಹನ ನಾಪತ್ತೆ ಪ್ರಕರಣದಲ್ಲಿ ಆರೋಪಿಯ ಪತ್ನಿಯನ್ನು ಬಂಧಿಸಲಾಗಿದೆ. ಪ್ರಕರಣದ ಆರೋಪಿ ವಾಹನ ಚಾಲಕ ಡೋಮ್ನೀಕ್ ಪತ್ನಿ ಎಲ್ವಿನ್ ನನ್ನು ಬಂಧಿಸಿದ್ದು, ಆಕೆಯ ಬಳಿಯಿದ್ದ 79.8 ಲಕ್ಷ ಹಣವನ್ನು ಜಪ್ತಿ ಮಾಡಲಾಗಿದೆ.
 
 
 
ಭಾನುವಾರ ರಾತ್ರಿ ಬಾಣಸವಾಡಿಯಲ್ಲಿರುವ ಮನೆಯೊಂದರಲ್ಲಿ ಡೋಮ್ನೀಕ್ ಪತ್ನಿ ಎಲ್ವಿನ್ ಮತ್ತು ಮಗನನ್ನು ಬಂಧಿಸಲಾಗಿದೆ. ಆದರೆ ಪ್ರಮುಖ ಆರೋಪಿ ಡೋಮ್ನಿಕ್ ಉಳಿದ 12 ಲಕ್ಷ ಸಮೇತ ಪರಾರಿಯಾಗಿದ್ದು, ಶೋಧ ಕಾರ್ಯ ಮುಂದುವರಿಸಲಾಗಿದೆ.
 
 
ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿ ಅನುಚೇತ್ ಪ್ರಕರಣ ಸಂಬಂಧ 4 ವಿಶೇಷ ತಂಡವನ್ನು ರಚಿಸಿದ್ದಾರೆ. ಚಿಕ್ಕಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
 
 
ನವೆಂಬರ್ 23ರಂದು ಕೆ.ಜಿ. ರಸ್ತೆಯಲ್ಲಿ ಹಣದ ವಾಹನ ನಾಪತ್ತೆಯಾಗಿದೆ. ಕೆ ಜಿ ರಸ್ತೆಯ ಬ್ಯಾಂಕ್ ಆಫ್ ಇಂಡಿಯಾ ಮುಂದೆ 1.37 ಕೋಟಿ ಹಣವಿದ್ದ ವಾಹನ ಸಮೇತ ಎಸ್ಕೇಪ್ ಆಗಿದ್ದ. ಪೊಲೀಸರು ನ.24ರಂದು ಮವಂಟ್ ಕಾರ್ಮೆಲ್ ಕಾಲೇಜು ಬಳಿ ವಾಹನ ಪತ್ತೆಹಚ್ಚಿದ್ದರು. ಸೆಕ್ಯೂರ್ ಟ್ರಾನ್ಸಟ್ಸ್ ಕಂಪನಿ ಚಾಲಕ ಡೋಮ್ನಿಕ್ ರಾಯ್ ವಾಹನದಲ್ಲಿ 45 ಲಕ್ಷ ಹಣ, ಗನ್ ಬಿಟ್ಟು 92 ಲಕ್ಷ ರೂ. ನಗದು, ಪತ್ನಿ, ಪುತ್ರನ ಜತೆ ನಾಪತ್ತೆಯಾಗಿದ್ದ. ಸೆಕ್ಯೂರ್ ಟ್ರಾನ್ಸಟ್ಸ್ ಕಂಪನಿಯು ಎಟಿಎಂಗಳಿಗೆ ಹಣ ತುಂಬುವ ಗುತ್ತಿಗೆ ಲಾಜಿ ಕ್ಯಾಶ್ ಕಂಪನಿಯನ್ನು ಗುತ್ತಿಗೆ ಪಡೆದಿತ್ತು. 1.37 ಕೋಟಿ ರೂ. ಹಣ ಎಸ್ ಬಿಐ, ಕೋಟಕ್ ಬ್ಯಾಂಕ್ ಗೆ ಸೇರಿದ್ದಾಗಿದೆ. ಸದ್ಯ ನಾಪತ್ತೆಯಾದ 92 ಲಕ್ಷ ಲಕ್ಷ ರೂ. ಹಣದಲ್ಲಿ 79.8 ಲಕ್ಷ ರೂ.ವನ್ನು ಜಪ್ತಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here