ಸಿಕ್ಕಿಬಿದ್ದನಾ.. ಎಟಿಎಂ ರಾಕ್ಷಸ!

0
429

ರಾಷ್ಟ್ರೀಯ ಪ್ರತಿನಿಧಿ ವರದಿ
ಬೆಂಗಳೂರಿನ ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣ ಆರೋಪಿಯ ಬಂಧನವಾಗಿದೆ. ಸತತ ಮೂರು ವರ್ಷಗಳ ನಂತರ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ಮಧುಕರ ರೆಡ್ಡಿಯನ್ನು ಮದನಪಟ್ಟಿ ಪೊಲೀಸರ ವಶದಲ್ಲಿದ್ದಾರೆ. ಈತನನ್ನು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
 
atm_aropi
ನವೆಂಬರ್ 19, 2013ರಲ್ಲಿ ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿದ್ದ ಮಹಿಳೆಯ ಮೇಲೆ ಮಧುಕರ ರೆಡ್ಡಿಯೇ ಹಲ್ಲೆನಡೆಸಿದ್ದ ಆರೋಪಿ ಎನ್ನಲಾಗಿದೆ. ಅಂದು ಜ್ಯೋತಿ ಎಂಬುವವರು ಬೆಳಗ್ಗೆ 7.15ರ ವೇಳೆಗೆ ಎಟಿಎಂ ಒಳ ಪ್ರವೇಶಿಸಿದ್ದರು. ಆಗ ಆರೋಪಿ ಜ್ಯೋತಿ ಉದಯ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ. ಎಸ್ ಜೆ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
 
 
2017ರ ಜನವರಿ 31ರಂದು ಮಧುಕರ ರೆಡ್ಡಿಯನ್ನು ಆಂಧ್ರ ಪೊಲೀಸರು ಗುರುತಿಸಿದ್ದರು. ಆದರೆ ಆರೋಪಿ ಬಗ್ಗೆ  ಬೆಂಗಳೂರು ಪೊಲೀಸರಿಗೆ ಇನ್ನೂ ಖಚಿತತೆ ಇಲ್ಲ . ಇನ್ನು ರಾಜ್ಯ ಪೊಲೀಸರು ಈ ಕುರಿತಾಗಿ ಸ್ಪಷ್ಟ ಮಾಹಿತಿ ನೀಡಬೇಕಾಗಿದೆ.
 
 
ರಸ್ತೆ ಬದಿಯಲ್ಲಿ ನಿಂತಿದ್ದ ಮಧುಕರ್ ರೆಡ್ಡಿಯನ್ನು ಟ್ರಾಫಿಕ್ ಪೊಲೀಸರು ಕಂಡುಹಿಡಿದಿದ್ದಾರೆ. ಮೊದಮೊದಲು ರೆಡ್ಡಿ ಅನುಮಾನಾಸ್ಪದವಾಗಿ ಮಾತನಾಡಿದ್ದ. ಕೊನೆಗೆ ಮದನಪಲ್ಲಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಮಧುಕರ್ ರೆಡ್ಡಿಯನ್ನು ಮೂರು ದಿನಗಳಿಂದ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪೊಲೀಸರ ಬಳಿ ನಾನೇ ಹಲ್ಲೆ ಮಾಡಿದ್ದು ಎಂದು ಹೇಳಿಕೆ ಕೊಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here