ಸಿಎಂ, ಸಚಿವರ ಆಪ್ತರ ಮನೆಯಲ್ಲಿ ಕೋಟಿ ಪತ್ತೆ

0
155

ಬೆಂಗಳೂರು ಪ್ರತಿನಿಧಿ ವರದಿ
 
ಮುಂದುವರಿದ ತನಿಖೆ update news
ಬೆಂಗಳೂರಿನಲ್ಲಿ ಐಟಿ ದಾಳಿ ಹಿನ್ನೆಲೆಯಲ್ಲಿ ಚಿಕ್ಕರಾಯಪ್ಪ, ಜಯಚಂದ್ರ ಬಳಿಯಿದ್ದ ಹಣದ ಮೂಲ ಪತ್ತೆಯಾಗಿದೆ. ತಮಿಳುನಾಡಿನ ಬ್ಯಾಂಕ್ ಗಳಿಂದ ಹಣ ಪಡೆದಿರುವುದು ಪತ್ತೆಯಾಗಿದೆ.
 
 
 
ಈ ಹಿನ್ನೆಲೆಯಲ್ಲಿ ಈರೋಡ್ ಜಿಲ್ಲೆಯ 4 ಖಾಸಗಿ ಬ್ಯಾಂಕ್ ಗಳಿಗೆ ಐಟಿ ಅಧಿಕಾರಿಗಳು ನೋಟಿಸ್ ಜಾರಿಯಾಗಿದೆ. ವಿಚಾರಣೆಗೆ ಹಾಜರಾಗುವಂತೆ ಬ್ಯಾಂಕ್ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.
 
 
ಐಟಿ ಅಧಿಕಾರಿಗಳು ಬ್ಯಾಂಕ್ ಗಳಿಂದ ಮಾಹಿತಿ ಪಡೆದು ಬಳಿ ಆರ್ ಬಿಐಗೆ ವರದಿ ಮಾಡಲಾಲಿದ್ದಾರೆ. ಅಲ್ಲದೆ ಕೆಲ ಸಹಕಾರಿ ಬ್ಯಾಂಕ್ ಗಳಿಂದಲೂ ಹಣ ಸಿಕ್ಕಿದ್ದರ ಮಾಹಿತಿ ಇದೆ. ಹಾಗೆಯೇ ಐಟಿ ಅಧಿಕಾರಿಗಳು ಹೊಸನೋಟುಗಳ ಮೂಲ ಹುಡುಕುತ್ತಿದ್ದಾರೆ. ಇದೇ ಬೆನ್ನಲ್ಲೇ 4 ಪ್ರತಿಷ್ಠಿತ ಬ್ಯಾಂಕ್ ಗಳಿಗೆ ನೋಟಿಸ್ ಜಾರಿಯಾಗಿದೆ.
 
 
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಹೆಚ್ ಸಿ ಮಹದೇವಪ್ಪ ಆಪ್ತರ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದೆ. ಸಿಎಂ ಸಿದ್ದರಾಮಯ್ಯ ಆಪ್ತ ಹಾಗೂ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ಚಿಕ್ಕರಾಯಪ್ಪ ನಿವಾಸದ ಮೇಲೆ ಐಟಿ ದಾಳಿ ನಡೆದಿದ್ದು, ರಾಯಪ್ಪರ ಮನೆಯಲ್ಲಿ ಕಂತೆ ಕಂತೆ ಹೊಸ ನೋಟು ಪತ್ತೆಯಾಗಿದೆ.ಸಂಜಯ್ ನಗರದ ಆರ್ ಎಂವಿ ಕಾಲೋನಿಯ ನಿವಾಸದಲ್ಲಿ ಹಣ ಪತ್ತೆಯಾಗಿದೆ.
 
 
ಜತೆಗೆ ರಾಜ್ಯ ಹೆದ್ದಾರಿ ವಿಭಾಗದ ವ್ಯವಸ್ಥಾಪಕ ಸಿ ಹೆಚ್ ಜಯಚಂದ್ರ ಮನೆ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಗನಿಗೆ ಐಷರಾಮಿ ಗಾಡಿ ಕೊಡಿಸಿ ಸಿಕ್ಕಿಬಿದ್ದಿದ್ದಾರೆ. ಐಟಿ ಅಧಿಕಾರಿಗಳು ಲ್ಯಾಂಬೋರ್ಗಿನಿಕಾರು, ಪೋರ್ಷೆ ಕಾರನ್ನು ವಶಪಡಿಸಿಕೊಂಡಿದ್ದಾರೆ. ಕಾರಿನ ಮೌಲ್ಯ 40 ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ.
 
ಖಾಸಗಿ ವೈದ್ಯ ನೇವೆಲ್ ಅಗರ್ ವಾಲ್ ಮನೆಯ ಮೇಲೂ ದಾಳಿ ನಡೆದಿದೆ.ಐಟಿ ದಾಳಿಯ ವೇಳೆ 6 ಕೋಟಿಗೂ ಹೆಚ್ಚು ನಗದು ಪತ್ತೆಯಾಗಿದೆ. 6 ಕೋಟಿ ರೂಪಾಯಿ ಪೈಕಿ 4.7ಕೋಟಿ ರೂಪಾಯಿ ಹೊಸ ನೋಟುಗಳಾಗಿವೆ. 2000ರೂ.ಮುಖಬೆಲೆಯ 25 ಕಂತೆ ಗರಿಗರಿ ನೋಟು ಮುಟ್ಟುಗೋಲು ಹಾಕಲಾಗಿದೆ. ಜತೆಗೆ 500 ಮತ್ತು 1000 ರೂಪಾಯಿ ಮುಖಬೆಲೆಯ 1.3ಕೋಟಿ ಹಣ ಕೂಡ ಜಪ್ತಿ ಮಾಡಲಾಗಿದೆ. ಅಲ್ಲದೆ 7ಕೆಜಿ ತೂಕವಿರುವ ಚಿನ್ನದ ಬಿಸ್ಕತ್ ಕೂಡ ದಾಳಿಯ ವೇಳೆ ಪತ್ತೆಯಾಗಿದೆ.
 
 
 
ಸದ್ಯ ದಾಳಿಯ ವೇಳೆ ಸಿಕ್ಕ ಕೋಟ್ಯಂತರ ರೂ.ಹಣದ ಬಗ್ಗೆ ಹಾಗೂ ಹೊಸ ನೋಟುಗಳು ಹೇಗೆ ಸಿಕ್ಕವು ಎಂಬ ಕುರಿತು ತನಿಖೆ ನಡೆಯುತ್ತಿದೆ ಎಂದು ಐಟಿ ಅಧಿಕಾರಗಳ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here