ಸಿಎಂ ರಾಜೀನಾಮೆ ನೀಡಲಿ: ಬಿಎಸ್ ವೈ

0
257

ಬೆಂಗಳೂರು ಪ್ರತಿನಿಧಿ ವರದಿ
ಡೈರಿ ವಿಷಯ ಮುಂದಿಟ್ಟುಕೊಂಡು ಜನತಾ ನ್ಯಾಯಾಲಯಕ್ಕೆ ಹೋಗೋಣವೆಂದು ಆಡಳಿತ ಪಕ್ಷ ಕಾಂಗ್ರೆಸ್ ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸವಾಲೆಸೆದಿದ್ದಾರೆ.
 
 
ಡೈರಿ ವಿಚಾರದಲ್ಲಿಯೇ ಕಾಂಗ್ರೆಸ್ ಪಕ್ಷ ಧೂಳೀಪಟವಾಗುತ್ತದೆ. ಎಲ್ಲಾ ಮಾಹಿತಿಗಳು ಈಗ ಜಗಜಾಹೀರವಾಗಿರೋದು ಸತ್ಯವಾಗಿದೆ. ನೈತಿಕತೆ ಇದ್ದರೆ ಈ ಕ್ಷಣವೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ. ಇದು ಶಿವರಾತ್ರಿ ದಿನ 6 ಕೋಟಿ ಕನ್ನಡಿಗರ ಒತ್ತಾಯ ಕೂಡವಾಗಿದೆ.
 
 
 
ಬೆಂಗಳೂರಿನಲ್ಲಿ ಗೋವಿಂದರಾಜು ಡೈರಿಯಲ್ಲಿದ್ದ ಮಾಹಿತಿ ಬಹಿರಂಗ ವಿಚಾರದಲ್ಲ ಮಾತನಾಡಿದ ರಾಜ್ಯದ ಜನರ ಮುಂದೆ ಕಾಂಗ್ರೆಸ್ ನಿಜವಾದ ಬಣ್ಣ ಬಯಲಾಗಿದೆ. ಡೈರಿ ವಿಚಾರ ಇಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಲಿ. ಡೈರಿಯಿಂದ ಯಾವ ಸಚಿವರಿಗೆ ಹಣ ನೀಡಿದ್ದಾರೆ ಎಂದು ತಿಳಿದಿದೆ. ಬೆಡ್ ರೂಂಗೆ ಹೋಗಿ ಯಾರೂ ಸಹ ಡೈರಿ ಇಟ್ಟು ಬರಲ್ಲ. ಎಲ್ಲಾ ವಿಷಯ ಬಹಿರಂಗಗೊಂಡಾಗ ಮಾತನಾಡೋದು ತಪ್ಪು. ಗೋವಿಂದು ವಿರುದ್ಧ ನಮ್ಮದೇನು ಆರೋಪವಿಲ್ಲ ಎಂದು ಬಿಎಸ್ ವೈ ಹೇಳಿದ್ದಾರೆ.
 
 
ಅವರು ಪಾಪ ಪೋಸ್ಟ್ ಮನ್ ರೀತಿ ಕೆಲಸ ಮಾಡಿದ್ದಾರೆ ಅಷ್ಟೇ. ಎಂಎಸ್ ಸಿ ಗೋವಿಂದರಾಜು ಒಬ್ಬ ಟ್ರೆಸರರ್ ಇದ್ದಂತೆ. ಬಿಜೆಪಿಯ ಮುಂದಿನ ಹೋರಾಟದ ಬಗ್ಗೆ ಈಗಲೇ ಹೇಳಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.
 
 
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯಲ್ಲಿ ಬರೊಬ್ಬರಿ ಮೂರು ಸಾವಿರ ಕೋಟಿ ರುಪಾಯಿ ಹಗರಣ ನಡೆದಿದ್ದು, ಈ ಕುರಿತು ನಾಳೆ ದಾಖಲೆಗಳನ್ನು ಬಹಿರಂಗಪಡಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಗುರುವಾರ ಗುಡುಗಿದ್ದರು.

LEAVE A REPLY

Please enter your comment!
Please enter your name here