ಸಿಎಂ ಮೀಟಿಂಗ್ ವಿಫಲ!

0
333

ಬೆಂಗಳೂರು ಪ್ರತಿನಿಧಿ ವರದಿ
ಉಪನ್ಯಾಸಕ ಸಂಘದ ಜತೆ ಸರ್ಕಾರದ ಮಾತುಕತೆ ವಿಫಲವಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಸಭೆ ವಿಫಲವಾಗಿದೆ.
 
ಪಿಯು ಮೌಲ್ಯಮಾಪನ ಬಹಿಷ್ಕಾರ ಬಗ್ಗೆ ನಾಳೆ ನಿರ್ಧರಿಸಲಾಗಿದೆ. ಪದಾಧಿಕಾರಿಗಳ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಭೆಯ ಬಳಿಕ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಹೇಳಿದ್ದಾರೆ.
 
10ವರ್ಷಗಳಿಂದ ವೇತನ ತಾರತಮ್ಯ ನಿವಾರಣೆಗೆ ಮನವಿ ಮಾಡಲಾಗಿತ್ತು. ‘ಕುಮಾರ್ ನಾಯಕ್ ವರದಿ ಅನುಷ್ಠಾನಕ್ಕೆ ಆಗ್ರಹಿಸಿದ್ದೇವೆ.ಆದರೆ ಸಿಎಂ ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಲಿಲ್ಲ. ಮೌಲ್ಯಮಾಪನ ಮುಗಿದ ಮೇಲೆ ನೋಡೋಣವೆಂದಿದ್ದಾರೆ. ಹಾಗಾಗಿ ಮೌಲ್ಯಮಾಪನ ಬಹಿಷ್ಕಾರಕ್ಕೆ ನಿರ್ಧರಿಸಿದ್ದೇವೆ. ಅಂತಿಮವಾಗಿ ನಾಳೆ ತೀರ್ಮಾನಿಸುತ್ತೇವೆ ಎಂದು ತಿಮ್ಮಯ್ಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here