ಸಿಎಂ ಪುತ್ರ ನಿಧನ

0
280

 
ಬ್ರೇಕಿಂಗ್ ನ್ಯೂಸ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೇಷ್ಠ ಪುತ್ರ ರಾಕೇಶ್ ಸಿದ್ದರಾಮಯ್ಯ(39) ಅವರು ಅಕಾಲಿಕವಾಗಿ ಮರಣಹೊಂದಿದ್ದಾರೆ. ಇಂದು ಬೆಲ್ಜಿಯಂ ಆಸ್ಪತ್ರೆಯಲ್ಲಿ ರಾಕೇಶ್ ಕೊನೆಯುಸಿರೆಳೆದಿದ್ದಾರೆ.
 
siiddu son rakesh
 
ಬಹು ಅಂಗಾಂಗ ವೈಫಲ್ಯದಿಂದ ಅಸುನೀಗಿದ್ದಾರೆ. ಬೆಲ್ಜಿಯಂನ ಬ್ರಸೆಲ್ಸ್ ನಲ್ಲಿರುವ ಆ್ಯಂಟ್ ವರ್ಪ್ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಾಕೇಶ್ ನಿಧನರಾಗಿದ್ದಾರೆ.
 
 
ರಾಕೇಶ್ ಅವರು ಪ್ಯಾಂಕ್ರಿಯಾಸ್ ತೊಂದರೆಯಿಂದ ಬಳಲುತ್ತಿದ್ದು, ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದರು. ಕಳೆದ ಒಂದು ವಾರದಿಂದ ಬೆಲ್ಜಿಯಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಗ ರಾಕೇಶ್ ಆರೋಗ್ಯ ವಿಚಾರಿಸಲು ಸ್ವತಃ  ಸಿಎಂ ಸಿದ್ದರಾಮಯ್ಯ ಅವರು ಬೆಲ್ಜಿಯಂಗೆ ತೆರಳಿದ್ದರು.
 
 
ಇದೇ ತಿಂಗಳು ಅಂದರೆ ಜುಲೈ 13ರಂದು ರಾಕೇಶ್ ಅವರು ಮಂಡ್ಯದಲ್ಲಿ  39ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.
 
 
 
ಪಾರ್ಥಿವ ಶರೀರವನ್ನು ತೆರಲು ನೆರವು ನೀಡಿ
ಮೃತ ರಾಕೇಶ್ ಸಿದ್ದರಾಮಯ್ಯ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲು ಅಗತ್ಯವಾದ ಎಲ್ಲಾ ರೀತಿಯ ನೆರವು ನೀಡಲು ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ.
 
 
ಬೆಲ್ಜಿಯಂನಲ್ಲಿರುವ ರಾಯಭಾರಿ ಕಚೇರಿಯಿಂದ ಎಲ್ಲಾ ನೆರವು ನೀಡುವಂತೆ ಪ್ರಧಾನಿ ಸೂಚನೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮೂಲಕ ಪ್ರಧಾನಿ ಕಚೇರಿಯಿಂದ ಬೆಲ್ಜಿಯಂನ ಭಾರತದ ರಾಯಭಾರಿ ಮನ್ ಜೀವ್ ಪುರಿಗೆ ಸೂಚಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಕುಟುಂಬ ಸಹಿತ ಬೆಂಗಳೂರಿಗೆ ಮರಳಲು ನೆರವು ನೀಡುವಂತೆ ಆದೇಶಿಸಲಾಗಿದೆ.
 
ನಾಳೆ ವಿಶೇಷ ವಿಮಾನದಲ್ಲಿ ಬೆಲ್ಜಿಯಂನಿಂದ ಬೆಂಗಳೂರಿಗೆ ರಾಕೇಶ್ ಪಾರ್ಥಿವ ಶರೀರ ಆಗಮಿಸಲಿದೆ ಎಂದು ಬಲ್ಲಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here