ಸಿಎಂ ನೇತೃತ್ವದ ಸಭೆಯಲ್ಲೇ ಸಚಿವರಿಗೆ ತರಾಟೆ

0
308

ಬೆಂಗಳೂರು ಪ್ರತಿನಿಧಿ ವರದಿ
ಸಿಎಂ ನೇತೃತ್ವದ ಸಭೆಯಲ್ಲೇ ಸಚಿವರಿಬ್ಬರನ್ನು ತೀವ್ರ ತರಾಟೆಗೆ ತೆಗೆದುಕೊಳ್ಳಲಾಗಿದೆ. ರಮಾನಾಥ್ ರೈ, ಎಂ ಬಿ ಪಾಟೇಲ್ ಗೆ ಬಿಜೆಪಿ ಶಾಸಕ ತರಾಟೆಗೆ ತೆಗೆದುಕೊಂಡಿದ್ದಾರೆ.
 
 
 
ಎತ್ತಿನಹೊಳೆ ಯೋಜನೆ ಸಂಬಂಧ ಸಿಎಂ ನೇತೃತ್ವದಲ್ಲಿ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ ನಡೆದಿತ್ತು. ಯೋಜನೆ ಬಗ್ಗೆ ಸರಿಯಾಗಿ ಮಾಹಿತಿ ನೀಡದೆ ಸಭೆಯಲ್ಲಿ ಗದ್ದಲ ಉಂಟಾಗಿತ್ತು. ಸಭೆಯಲ್ಲಿ ಗದ್ದಲವೆಬ್ಬಿಸಿದ ಸಚಿವ ರಮಾನಾಥ್ ರೈಯನ್ನು ಬಿಜೆಪಿಯ ಶಾಸಕ ಸುನಿಲ್ ಕುಮಾರ್ ತರಾಟೆ ತೆಗೆದುಕೊಂಡಿದ್ದಾರೆ.
 
 
 
ನಮ್ಮ ಪ್ರಶ್ನೆಗಳನ್ನು ಆಲಿಸಲು ನೀವು ಸಿದ್ಧರಿಲ್ಲ. ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದಿದ್ದರೆ ಸಭೆಗೆ ಆಹ್ವಾನಿಸಿದ್ದೇಕೆ? ಎಂದು ಎಂದು ಬಿಜೆಪಿ ಶಾಸಕರು ರೈಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
 
 
 
ಸಭೆಯಲ್ಲಿ ಕರಾವಳಿ ಭಾಗದ ಜನಪ್ರತಿನಿಧಿಗಳು ಮೂರು ಪ್ರಶ್ನೆಗಳನ್ನು ಕೇಳಿದ್ದರು. ಪ್ರಶ್ನೆಗಳಲ್ಲಿ ಒಂದು-ಕುಮಾರಧಾರಾ ನದಿಗೆ 6 ಉಪನದಿಗಳ ನೀರು ಹರಿಯುತ್ತದೆ. ಕುಮಾರಧಾರಾ ನೀರು ತಿರುವುಗೊಳಿಸಿದಿದ್ರೆ ಯೋಜನೆ ಎಲ್ಲಿಂದ ನೀರು ತರುತ್ತೀರಾ?, ಎರಡನೆಯ ಪ್ರಶ್ನೆ-ಸರ್ಕಾರ ಅರಣ್ಯ ಭೂಮಿಯಲ್ಲಿ ನೀರಿನ ಪೈಪ್ ಅಳವಡಿಕೆ ಹೇಗೆ?, ಪ್ರಶ್ನೆ ಮೂರು- ಹಸಿರು ಪೀಠದಿಂದ ಯೋಜನೆಗೆ ಸಂಪೂರ್ಣ ಒಪ್ಪಿಗೆ ಸಿಕ್ಕಿಲ್ಲ. ಹೀಗಿರುವಾದ ಯೋಜನೆಯ ಅನುಷ್ಠಾನ ಹೇಗೆ ಎಂದು ಸಭೆಯಲ್ಲಿ ಜನಪ್ರತಿನಿಧಿಗಳು ಪ್ರಶ್ನಿಸಿದ್ದಾರೆ.
 
 
 
ಕರಾವಳಿ ಭಾಗದ ಜನಪ್ರತಿನಿಧಿಗಳು ಕೇಳಿದ ಈ ಮೂರು ಪ್ರಶ್ನೆಗಳಿಗೆ ಉತ್ತರಿಸಲು ಸಭೆಯಲ್ಲಿ ಸಚಿವರು ವಿಫಲರಾಗಿದ್ದರು. ಹೀಗಾಗಿ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ಕಾಂಗ್ರೆಸ್ ಸಚಿವರಾದ ರಮಾನಾಥ್ ರೈ, ಎಂ ಬಿ ಪಾಟೀಲ್ ರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಎತ್ತಿನಹೊಳೆ ಯೋಜನೆ ರೂಪರೇಷೆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಸಭೆಯಲ್ಲಿ ಸ್ಪಷ್ಟ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸಚಿವರನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here