'ಸಿಎಂ ನನ್ನಲ್ಲಿ ಬರಲಿ, ನಾನು ಸಲಹೆ ನೀಡುತ್ತೇನೆ'

0
119

ಉಡುಪಿ ಪ್ರತಿನಿಧಿ ವರದಿ
ಮೂಢನಂಬಿಕೆ ನಿಷೇಧಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧೈರ್ಯ ಇಲ್ಲ ಎಂದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥಶ್ರೀಗಳು ಹೇಳಿದ್ದಾರೆ.
 
 
ಮೂಢನಂಬಿಕೆ ನಿಷೇಧ ವಿಚಾರದಲ್ಲಿ ನಿನ್ನೆ ಸಿಎಂ ತಾಳಿದ ದ್ವಂದ್ವ ನಿಲುವು ಬಗ್ಗೆ ಉಡುಪಿಯಲ್ಲಿ ಮಾತನಾಡಿದ ಶ್ರೀಗಳು ಮೂಢನಂಬಿಕೆ ನಿಷೇಧವನ್ನು ಯಾವ ರೀತಿ ಮಾಡಬಹುದು ಎಂದು ಹೇಳುವ ಧೈರ್ಯ ನನಗಿದೆ. ನನ್ನಲ್ಲಿ ಬರಲಿ, ನಾನು ಅವರಿಗೆ ಸಲಹೆ ನೀಡುತ್ತೇನೆ. ಆದರೆ ನನ್ನ ಜೊತೆ ಸಮಾಲೋಚನೆ ನಡೆಸಲು ಸಿಎಂ ಸಿದ್ಧರಿಲ್ಲ ಎಂದು ಹೇಳಿದ್ದಾರೆ.
 
 
 
ನಾನು ಮೂಢನಂಬಿಕೆಗೆ ಬೆಂಬಲ ನೀಡುತ್ತೇನೆ ಎಂದು ಸಿಎಂ ಭಾವಿಸಿದ್ದಾರೆ. ನನ್ನ ಬಗ್ಗೆ ರಾಜಕಾರಣಿಗಳಿಗೆ ತಪ್ಪು ಕಲ್ಪನೆ ಇದೆ. ಮಡೆಸ್ನಾನವನ್ನೂ ನಾನು ವಿರೋಧಿಸಿದ್ದೇನೆ. ಯಾರ ವಿರೋಧವೂ ಬರದಂತೆ ನಿಭಾಯಿಸುವ ಧೈರ್ಯ ನನಗಿದೆ. ಮೂಢನಂಬಿಕೆ ಯಾವುದು ಅನ್ನೋದು ಪಟ್ಟಿಯಾಗಬೇಕು ಎಂದು ಶ್ರೀಗಳು ತಿಳಿಸಿದ್ದಾರೆ.
 
 
 
ಮೂಢನಂಬಿಕೆ ಯಾವುದು ಅನ್ನೋದು ಪಟ್ಟಿಯಾಗಬೇಕು. ಕೆಲವರಿಗೆ ದೇವಸ್ಥಾನಕ್ಕೆ ಹೋಗೋದು ಕೂಡ ಮೂಢನಂಬಿಕೆಯಾಗಿದೆ. ಸಮಾಜಕ್ಕೆ ಹಾನಿಯಾಗುವ ಮೂಢನಂಬಿಕೆಗಳು ನಿಷೇಧವಾಗಬೇಕು ಎಂದು ಶ್ರೀಗಳು ಹೇಳಿದ್ದಾರೆ.
 
 
 
ನಿನ್ನೆ ಮೂಢನಂಬಿಕೆ ನಿಷೇಧ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ದ್ವಂದ್ವ ನಿಲುವು ತಾಳಿದ್ದರು. ‘ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕಾರಣದಿಂದಾಗಿ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಜಾರಿಗೆ ತರಲಾಗುತ್ತಿಲ್ಲ’ ಎಂದು ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಟ್ವೀಟ್ಟರ್ ಖಾತೆಯಲ್ಲಿ ತನ್ನ ಅಸಹಾಯಕತೆಯನ್ನು ತಿಳಿಸಿದ್ದರು.

LEAVE A REPLY

Please enter your comment!
Please enter your name here