ಸಿಎಂ ಉತ್ತರಾಧಿಕಾರಿಯಾಗಿ ಡಾ.ಯತೀಂದ್ರ?

0
415

 
ಬೆಂಗಳೂರು ಪ್ರತಿನಿಧಿ ವರದಿ
ಸಿಎಂ ಎರಡನೇ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ರಾಜಕೀಯಕ್ಕೆ ಎಂಟ್ರಿಯಾಗಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್ ಸಿದ್ದರಾಮಯ್ಯ ಅಕಾಲಿಕ ಮರಣಕ್ಕೆ ತುತ್ತಾದ ಬಳಿಕ ಸಿಎಂ ಸಿದ್ದರಾಮಯ್ಯ ಅವರ ಮುಂದಿನ ಉತ್ತರಾಧಿಕಾರಿಯಾಗಿ ಅವರ ಎರಡನೇ ಪುತ್ರ ಡಾ. ಯತೀಂದ್ರ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿದೆ.
 
 
ನಿನ್ನೆ ಮೈಸೂರಿಗೆ ಆಗಮಿಸಿದ್ದ ಡಾ. ಯತೀಂದ್ರ ಅವರು ಚಾಮುಂಡೇಶ್ವರಿ ಮತ್ತು ವರುಣಾ ವಿಧಾನಸಭಾ ಕ್ಷೇತ್ರದ ಪ್ರಮುಖ ಮುಖಂಡರನ್ನು ಭೇಟಿಯಾಗಿ, ಪರಿಚಯ ಮಾಡಿಕೊಂಡಿದ್ದಾರೆ. ಅಲ್ಲದೇ, ಶಾರದಾದೇವಿ ನಗರದ ನಿವಾಸದ ಬಳಿ ಬಂದ ಸಾರ್ವಜನಿಕರನ್ನು ಮಾತನಾಡಿಸಿದ್ದಾರೆ.
 
 
ಮತದಾರರ ಒತ್ತಾಯ ಹಾಗು ಸಿದ್ದರಾಮಯ್ಯನವರ ಆಪ್ತರ ಕೋರಿಕೆ ಮೇರೆಗೆ ತಮ್ಮ ಕಿರಿಯ ಪುತ್ರ ಡಾ. ಯತೀಂದ್ರ ಅವರನ್ನು ರಾಜಕೀಯ ರಂಗಕ್ಕೆ ಕರೆತರಲು ಸಿದ್ಧತೆಗಳು ನಡೆದಿವೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
 
ನಾವು ಈ ಹಂತಕ್ಕೆ ಬರಲು ಅಭಿಮಾನಿಗಳು, ಬೆಂಬಲಿಗರೇ ಕಾರಣ. ಭವಿಷ್ಯದಲ್ಲೂ ಬೆಂಬಲಿಗರು, ಅಭಿಮಾನಿಗಳ ಹಿತ ಕಾಯುವುದು ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ರಾಜಕೀಯದಿಂದ ದೂರ ಉಳಿಯುವುದು ಸರಿಯಲ್ಲ, ರಾಜಕೀಯಕ್ಕೆ ಬಂದು ಬೆಂಬಲಿಗರು, ಅಭಿಮಾನಿಗಳ ಸೇವೆ ಮಾಡುವಂತೆ ಸಿಎಂ ಕಿವಿಮಾತು ಹೇಳಿದ್ದಾರೆ. ಇದಕ್ಕೆ ಒಪ್ಪಿರುವ ಯತೀಂದ್ರ ವಾರಕ್ಕೊಮ್ಮೆ ಕ್ಷೇತ್ರದಲ್ಲಿ ಓಡಾಡಲು ನಿರ್ಧಾರ ಮಾಡಿದ್ದು, ಅದರಂತೆ ಕಳೆದ 2 ದಿನಗಳಿಂದ ಯತೀಂದ್ರ ಅವರು ಮೈಸೂರಿನಲ್ಲಿದ್ದಾರೆ. ಜೊತೆಗೆ ಸಿಎಂ ಆಪ್ತರು, ಬೆಂಬಲಿಗ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here