ಸಿಎಂ ಆಪ್ತ ಪೊಲೀಸರಿಗೆ ಶರಣು

0
422

 
ಮೈಸೂರು ಪ್ರತಿನಿಧಿ ವರದಿ
ಮೈಸೂರು ಡಿಸಿ ಶಿಖಾಗೆ ಧಮ್ಕಿ ಹಾಕಿದ ಪ್ರಕರಣದ ಹಿನ್ನೆಲೆಯಲ್ಲಿ ಮೈಸೂರಿನ ನಜರ್ ಬಾದ್ ಠಾಣೆಯಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತ ಕೆ. ಮರಿಗೌಡ ಶರಣಾಗಿದ್ದಾನೆ.
 
ಡಿಸಿ ಶಿಖಾ ಅವರನ್ನು ನಿಂದಿಸುವುದರೊಂದಿಗೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪ ಹೊತ್ತಿದ್ದ ಸಿಎಂ ಆಪ್ತ ಮರಿಗೌಡ ಕಳೆದ ಒಂದು ತಿಂಗಳಿನಿಂದ ತಲೆ ಮರೆಸಿಕೊಂಡಿದ್ದ. ಈ ವೇಳೆ ನಿರೀಕ್ಷಣಾ ಜಾಮೀನು ಪಡೆಯಲು ಸಾಕಷ್ಟು ಪ್ರಯತ್ನ ನಡೆಸಿದ್ದ. ಎರಡು ದಿನಗಳ ಹಿಂದೆಯೂ ಮರಿಗೌಡ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ ಈತನ ಅರ್ಜಿಯನ್ನು ತಿರಸ್ಕರಿಸಿತ್ತು.
 
ಇದೀಗ ನಿರೀಕ್ಷಣಾ ಜಾಮೀನು ಸಿಗದಿರುವ ಹಿನ್ನೆಲೆಯಲ್ಲಿ ವಕೀಲರೊಂದಿಗೆ ಖುದ್ದಾಗಿ ನಜರ್’ಬಾದ್ ಠಾಣೆಗೆ ಆಗಮಿಸಿರುವ ಮರಿಗೌಡ ನ್ಯಾಯಾಲಯದೆದುರು ಶರಣಾಗತಿಯಾಗಿದ್ದಾನೆ.

LEAVE A REPLY

Please enter your comment!
Please enter your name here