ಸಿಎಂ ಆಗಿ ತ್ರಿವೇಂದ್ರ ಸಿಂಗ್ ಪದಗ್ರಹಣ

0
371

ರಾಷ್ಟ್ರೀಯ ಪ್ರತಿನಿಧಿ ವರದಿ
ಉತ್ತರಾಖಂಡ್ ಮುಖ್ಯಮಂತ್ರಿಯಾಗಿ ತ್ರಿವೇಂದ್ರ ಸಿಂಗ್ ರಾವತ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾವತ್ ಅವರು ಉತ್ತರಾಖಂಡ್ 9 ನೇ ಮುಖ್ಯಮಂತ್ರಿ ಪದಗ್ರಹಣ ನಡೆಸಿದ್ದಾರೆ.
 
trivendra singh ravat_jarkhand cm1
ಉತ್ತರಾಖಂಡ್ ರಾಜಧಾನಿ ಡೆಹ್ರಾಡೂನ್ ನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಕೃಷ್ಣಕಾಂತ್ ಪಾಲ್ ಪ್ರಮಾಣವಚನವನ್ನು ಬೋಧಿಸಿದ್ದಾರೆ. ರಾವತ್ ಅವರು ಡೋಯಿವಾಲಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
 
 
7 ಕ್ಯಾಬಿನೆಟ್ ಸಚಿವರು, ಇಬ್ಬರು ರಾಜ್ಯಸಚಿವರ ಪದಗ್ರಹಣ ಸಮಾರಂಭ ನಡೆದಿದೆ. ಯಶ್ ಪಾಲ್ ಆರ್ಯ. ಅರವಿಂದ್ ಪಾಂಡೆ, ಸತ್ ಪಾಲ್ ಮಹಾರಾಜ್, ಪ್ರಕಾಶ್ ಪಂತ್, ಹರಕ್ ಸಿಂಗ್ ರಾವತ್, ಮದನ್ ಕೌಶಿಕ್, ಸುಬೋಧ್ ಅನಿಯಾಲ್ ಕ್ಯಾಬಿನೆಟ್ ಸಚಿವರಾಗಿ ಪದಗ್ರಹಣ ಸ್ವೀಕರಿಸಿದ್ದಾರೆ. ಸಚಿವರಾಗಿ ರೇಖಾಆರ್ಯ, ಧನ್ ಸಿಂಗ್ ರಾವತ್ ಪದಗ್ರಹಣ ಸ್ವೀಕರಿಸಿದ್ದಾರೆ.
 
 
ಅವರು ಪದಗ್ರಹಣ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಸೇರಿ ಹಲವು ಬಿಜೆಪಿ ನಾಯಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here