ಸಿಎಂಗೆ ಪೂಜಾರಿ ಪ್ರಶ್ನೆ

0
319

ಮಂಗಳೂರು ಪ್ರತಿನಿಧಿ ವರದಿ
ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಗುಡುಗಿದ್ದಾರೆ. ಮಾಜಿ ಸಚಿವ ಹೆಚ್ ವೈ ಮೇಟಿ ರಾಸಲೀಲೆ ಸಿಡಿ ಪ್ರಕರಣದ ಬಗ್ಗೆ ಪೂಜಾರರು ಮಾತನಾಡಿದ್ದಾರೆ.
 
 
 
ಇನ್ನೂ ಇಬ್ಬರು ಸಚಿವರು, ಮೂವರು ಶಾಸಕರ ಬಗ್ಗೆ ಹೇಳಿದ್ದಾರೆ. ಇಬ್ಬರು ಸಚಿವರು, ಶಾಸಕರು ಯಾರೆಂದು ಸಿಎಂಗೆ ಗೊತ್ತಿಲ್ವ? ಸಿಡಿ ತರಿಸಿ ನೋಡುವ ತಾಕತ್ತು ಸಿದ್ದರಾಮಯ್ಯಗೆ ಇಲ್ಲವೇ?, ರಾಜಶೇಖರ್ ಜೊತೆ ಸಿದ್ದರಾಮಯ್ಯ ಮಾತನಾಡಿಲ್ಲವೇಕೆ? ಎಂದು ಮಂಗಳೂರಿನಲ್ಲಿ ಪೂಜಾರಿ ಪ್ರಶ್ನಿಸಿದ್ದಾರೆ.
 
 
ಪಕ್ಷ ನಾಶವಾಗುತ್ತದೆ ಎಂಬ ಅಂಜಿಕೆ ಸಿದ್ದರಾಮಯ್ಯಗಿಲ್ಲ. ಪ್ರಕರಣದ ಬಗ್ಗೆ ಮಾಹಿತಿ ಪಡೆಯದಿದ್ದರೆ ಸಿದ್ದರಾಮಯ್ಯನ ಮುರ್ಖತನವಾಗುತ್ತದೆ. ಕಾಂಗ್ರೆಸ್ ಪಕ್ಷ ಈಗ ಸಿದ್ದರಾಮಯ್ಯ ಉತ್ತರ ಬಯಸುತ್ತಿದೆ. ಈಗ ಸಿಎಂ ಸಿದ್ದರಾಮಯ್ಯ ಎಲ್ಲಿ ಅಡಗಿ ಕೂತಿದ್ದಾರೆ? ಎಂದು ಪೂಜಾರಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here