ಸಿಂಹಾಸನವೇರಿದ ಯದುವೀರ

0
173

ಮೈಸೂರು ಪ್ರತಿನಿಧಿ ವರದಿ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2016ರ ದಸರಾ ಸಂಭ್ರಮ ಅಂಬಾವಿಲಾಸ ಅರಮನೆಯಲ್ಲಿ ಮೇಳೈಸಿದೆ.
 
 
ದರ್ಬಾರ್ ಗೂ ಮೊದಲು ಸಿಂಹಾಸನ ಪೂಜೆ ನೇರವೇರಿಸಲಾಗಿದೆ. ಪಾರಂಪರಿಕ ರತ್ನಖಚಿತ ಸಿಂಹಾಸನಕ್ಕೆ ರಾಜವಂಶಸ್ಥ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೊದಲ ಪೂಜೆ ಸಲ್ಲಿಸಿದ್ದಾರೆ. ಇಂದಿನಿಂದ ಯುದುವೀರ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಪ್ರತಿದಿನ ಸಂಜೆ ಯದುವೀರರಿಂದ ಖಾಸಗಿ ದರ್ಬಾರ್ ನಡೆಯಲಿದೆ. ಈ ಬಾರಿ ರಾಜಮನೆತನದಿಂದ 11 ದಿನದ ದಸರಾ ಆಚರಣೆ ನಡೆಯಲಿದೆ.
 
 
ಯದುವೀರ ರಾಜಪೋಷಾಕು ತೊಟ್ಟು ಕಂಗೊಳಿಸುತ್ತಿದ್ದಾರೆ. ಅರಮನೆಯ ದರ್ಬಾರ್ ಹಾಲ್ ನಲ್ಲಿ ಖಾಸಗಿ ದರ್ಬಾರ್ ನಡೆಸಿದ್ದಾರೆ. ಮಹಾರಾಜನಿಗೆ ಅರಮನೆ ಪುರೋಹಿತರು ಗೌರವ ಸಲ್ಲಿಸಿದ್ದಾರೆ.
 
 
 
ನಾಡದೇವತೆಗೆ ಪೂಜೆ ಸಲ್ಲಿಸಿದ ಸಿಎಂ
ನಾಡದೇವತೆ ಚಾಮುಂಡಿ ದೇವಿಗೆ ಸಿಎಂ ಸಿದ್ದರಾಮಯ್ಯ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮೈಸೂರಿನ ಚಾಮುಮಡಿ ಬೆಟ್ಟದಲ್ಲಿ ಸಿಎಂ ಪೂಜೆ ಸಲ್ಲಿಸಿದ್ದಾರೆ. ಸಚಿವರು, ಶಾಸಕರ ಜೊತೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here