ಸಿಂಧೂ ನದಿ ನೀರು ವಿವಾದ: ಪಾಕ್ ನಿಂದ ಭಾರತಕ್ಕೆ ಆಹ್ವಾನ

0
453

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ವಿವಾದವನ್ನು ಬಗೆಹರಿಸಲು ಭಾರತಕ್ಕೆ ಪಾಕಿಸ್ತಾನ ಆಹ್ವಾನ ನೀಡಿದೆ. ಇದರಿಂದ ಈ ತಿಂಗಳು ಲಾಹೊರ್ ನಲ್ಲಿ ನಡೆಯಲಿರುವ ಶಾಶ್ವತ ಸಿಂಧೂ ಆಯೋಗದ ಸಭೆಯಲ್ಲಿ ಭಾರತ ಭಾಗವಹಿಸಲಿದೆ ಎಂದು ಮೂಲಗಳು ತಿಳಿಸಿವೆ.
 
 
 
ಶಾಶ್ವತ ಸಿಂಧೂ ಆಯೋಗವು ದ್ವಿಪಕ್ಷೀಯ ಆಯೋಗವಾಗಿದ್ದು, ಭಾರತ ಮತ್ತು ಪಾಕಿಸ್ತಾನದ ಅಧಿಕಾರಿಗಳು ಅದರಲ್ಲಿದ್ದಾರೆ. ಸಿಂಧೂ ನದಿ ನೀರು ಒಪ್ಪಂದದ ಉದ್ದೇಶಗಳನ್ನು ನಿರ್ವಹಿಸಿ ಜಾರಿಗೊಳಿಸಲು ಈ ಆಯೋಗವನ್ನು ರಚಿಸಲಾಗಿದೆ.
 
 
 
ಕಳೆದ ವರ್ಷ ಜನವರಿಯಲ್ಲಿ ಪಠಾಣ್ ಕೋಟ್ ದಾಳಿಯ ನಂತರ ಎರಡು ಪರಮಾಣು ಶಕ್ತಿಯುತ ರಾಷ್ಟ್ರಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟ ನಂತರ ಇದೀಗ ಈ ಬೆಳವಣಿಗೆಗಳಾಗಿದೆ.

LEAVE A REPLY

Please enter your comment!
Please enter your name here