ಸಾವಿರ ಕಂಬದ ಬಸದಿಗೆ ಭೇಟಿ

0
2385

ಮೂಡುಬಿದಿರೆ: ಮಂಗಳೂರು ಪೊಲೀಸ್ ಆಯುಕ್ತರು ಶುಕ್ರವಾರ ತಮ್ಮ ಕಮಿಷನರೇಟ್ ವ್ಯಾಪ್ತಿಯ ಮೂಡು ಬಿದಿರೆ ಗೆ  ಭೇಟಿ ಇತ್ತು ನಂತರ ಮದ್ಯಾಹ್ನ 1.30 ಕ್ಕೆ ವಿಶ್ವ ಪ್ರಸಿದ್ದ ಸಾವಿರ ಕಂಬದ ಬಸದಿಗೆ ಭೇಟಿ ನೀಡಿದರು. ಕೊವಿಡ್ 19 ಕಾರಣ ಬಸದಿ ಸದ್ಯ ಮುಚ್ಚಿದ್ದುಬಸದಿ ಕಾವಲು ಗಾರರು ಮಾತ್ರ ಇದ್ದಾರೆ ಇಲ್ಲಿ ಈಗ ದೈನಂದಿನ ಪೂಜಾ ಕಾರ್ಯ ಸ್ವಾಮೀಜಿ ಯವರ ಜಪ ಅನುಷ್ಠಾನ ಮಾತ್ರ ನಡೆಯುತ್ತಿದೆ. ಸಾರ್ವಜನಿಕ ರಿಗೆ ಸೇವೆಗೆ ಅವಕಾಶ ಇರುದಿಲ್ಲ.

ಈ ಸಂದರ್ಭದಲ್ಲಿ ಮಂಗಳೂರು ಆಯುಕ್ತ ಎನ್ ಶಶಿ ಕುಮಾರ್ ರವರಿಗೆ ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಶ್ರೀ ಗಳು  ಬಸದಿ ಇತಿಹಾಸ ತಿಳಿಸಿ ಆಶೀರ್ವಾದ ನೀಡಿದರು. ಅಯುಕ್ತರು ಮೂಡುಬಿದಿರೆ ಬಸದಿ ರಕ್ಷಣೆಗೆ ಕೈಗೊಂಡ ಕ್ರಮ ಗಳ ಬಗ್ಗೆ ಮಾಹಿತಿ ಪಡೆದರು ಕೊರೊನ ಕಾಲದಲ್ಲೂ  ಶಾಂತಿ ಸುವ್ಯವಸ್ಥೆಯ ಸೇವಾ ತತ್ಪರ ರಾದ ಪೊಲೀಸ್ ಇಲಾಖೆ ಹಾಗೂ ಸಮಸ್ತ ರಿಗೆ ಅರೋಗ್ಯ ಶಾಂತಿ ಪ್ರಾಪ್ತಿ ಯಾಗಲೆಂದು  ಭಗವಾನ್ ಶ್ರೀ 1008 ಚಂದ್ರ ನಾಥ ಸ್ವಾಮಿ ಯಲ್ಲಿ ಪ್ರಾರ್ಥಿಸಿ ಹರಸಿ ಆಶೀರ್ವದಿಸಿದರು. ಮೂಡು ಬಿದಿರೆ ಠಾಣಾಧಿಕಾರಿ ದಿನೇಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here