ಸಾವಿನ ಸವಾರಿ ಕಿರು ಚಿತ್ರಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ

0
143

 
ಉಜಿರೆ ಪ್ರತಿನಿಧಿ ವರದಿ
ಯುನಿಸೇಫ್ ಪ್ರಸಾರ ಭಾರತಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ದಿಶಾ ಕಮ್ಯುನಿಕೇಶನ್ ಉಡುಪಿ. ಕರ್ನಾಟಕ ಚಲನಚಿತ್ರ ಅಕಾಡೆಮಿ ಇದರ ಆಶ್ರಯದಲ್ಲಿ ರಾಜ್ಯ ಮಟ್ಟದ ಕಿರುಚಿತ್ರ ಸ್ಪರ್ಧೆ, 2ನೇ ಕರಾವಳಿ ಕಿರು ಚಿತ್ರೋತ್ಸವ – 2016. ಇದರಲ್ಲಿ ಸುರೇಂದ್ರ ಜೈನ್ ನಾರಾವಿ ನಿರ್ಮಾಣದ ಸಾವಿನ ಸವಾರಿ ಕಿರುಚಿತ್ರ ಆಯ್ಕೆಯಾಗಿದ್ದು ತೀರ್ಪುಗಾರರ ಮೆಚ್ಚುಗೆಯ ವಿಶೇಷ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತದೆ.
 
 
ತೆಲಿಕೆ ನಲಿಕೆ ಪ್ರೊಡಕ್ಷನ್ಸ್ ರವರ ಎಸ್.ಡಿ.ಎಂ. ಮಲ್ಟಿಮೀಡಿಯ ಸ್ಟುಡಿಯೋ ಇದರ ಆಶ್ರಯದಲ್ಲಿ ಸಾವಿನ ಸವಾರಿ ಕಿರುಚಿತ್ರ 9-02-2016ರಂದು ಕಾಲೇಜಿನ ಪ್ರಾಂಶುಪಾಲರಾದ ಡಾ| ಕೆ.ಎಸ್. ಮೋಹನ ನಾರಾಯಣ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ. ಭಾಸ್ಕರ್ ಹೆಗ್ಡೆ, ಕಾಲೇಜಿನ ಅಧೀಕ್ಷಕರಾದ ಯುವರಾಜ ಪೂವಣಿ ಇವರ ಉಪಸ್ಥಿತಿಯಲ್ಲಿ ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಬಿಡುಗಡೆಗೊಂಡಿರುತ್ತದೆ.
 
 
ಇದರ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ಮಾಣ ಸುರೇಂದ್ರ ಜೈನ್ ನಾರಾವಿ, ನಿರ್ದೇಶನ – ಧನ್ರಾಜ್ ಎಂ. ನಿಡಿಗಲ್, ಪರಿಕಲ್ಪಣೆ – ಸಂದೀಪ್ ಕುಮಾರ್, ಉಜಿರೆ, ಸಂಕಲನ – ಕೃಷ್ಣಕಾಂತ್ ನಾರಾವಿ, ಛಾಯಾಗ್ರಹಣ – ರೂಪಲ್ ಶೆಟ್ಟಿ ಮತ್ತು ಅಶುರಾಗ್ ಗೌಡ, ತಾಂತ್ರಿಕ ನಿರ್ವಹಣೆ – ದೇವಿಪ್ರಸಾದ್ ಮುಂಡಾಜೆ, ಹರಿಶ್ಚಂದ್ರ ನಾರಾವಿ, ವಿಕಾಸ್ ಶಿರ್ಲಾಲು. ತಾಂತ್ರಿಕ ಸಲಹೆ – ಶೀವಶಂಕರ್, ತುಕರಾಮ್ ಸಾಲಿಯಾನ್, ಸುನಿಲ್ ಹೆಗ್ಡೆ, ಮಾಧವ ಹೊಳ್ಳ.
ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಆ್ಯಕ್ಸಿಡೆಂಟ್, ಹೆಲ್ಮೆಟ್, ಮಾದಕ ದ್ರವ್ಯದ ಬಗ್ಗೆ ಜಾಗೃತಿಯನ್ನು ವಿಶ್ಲೇಷಿಸಲಾಗಿದೆ.
 
 
ಮುಖ್ಯ ಪಾತ್ರದಲ್ಲಿ ನವೀನ್, ಪ್ರಶಾಂತ್ ದಿಡುಪೆ, ತುಕರಾಮ್ ಸಾಲ್ಯಾನ್, ಪೂರ್ಣಿಮ, ಸುವರ್ಚಲ, ಗಣೇಶ್ ಸೆಂದ್ಯೆ, ಕುಶಾಲಪ್ಪ ಗೌಡ ಗುರಿಪಳ್ಳ, ಸೂರಜ್ ಜೈನ್ ನಾರಾವಿ, ನವೀನ್ ಜೈನ್, ಲಕ್ಷ್ಮೀನಾರಾಯಣ್, ವನಿತಾ ಶೆಟ್ಟಿ ಮತ್ತು ದೇವಿಪ್ರಸಾದ್ ಮುಂಡಾಜೆ ಮತ್ತಿತರರು ಅಭಿನಯಿಸಿದ್ದಾರೆ.
 

LEAVE A REPLY

Please enter your comment!
Please enter your name here