ಸಾವಿನಲ್ಲಿ ಒಂದಾದ ಪ್ರೇಮಿಗಳು

0
186

 
ಬೆಂಗಳೂರು ಪ್ರತಿನಿಧಿ ವರದಿ
ಪ್ರೇಮವೈಫಲ್ಯದಿಂದ ಮನನೊಂದು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಸನದಲ್ಲಿ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡರೆ, ಪ್ರಿಯತಮೆ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
 
 
 
ರಾಘವೇಂದ್ರ(30) ಮತ್ತು ಅನು(25) ಆತ್ಮಹತ್ಯೆ ಮಾಡಿಕೊಂಡ ಅಮರ ಪ್ರೇಮಿಗಳಾಗಿದ್ದಾರೆ. ನಿನ್ನೆ ರಾತ್ರಿ ಹಾಸನದಲ್ಲಿ ಪ್ರಿಯಕರ ರಾಘವೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಿಯಕರನ ಸಾವಿನ ಸುದ್ದಿ ಕೇಳಿ ಅಘಾತಗೊಂಡ ಪ್ರಿಯತಮೆ ಅನು ಇಂದು ಬೆಳಗ್ಗೆ ಬೆಂಗಳೂರಿನ ವಿಜಯನಗರ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
 
ರಾತ್ರಿ ಫೊನ್ ಮಾಡಿದ್ದ ಅನುಗೆ ಪೊಲೀಸರು ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಸಾವಿಗೆ ಮುನ್ನ ರಾಘವೇಂದ್ರ ನಾಲ್ಕು ಪುಟದ ಡೆತ್ ನೋಟ್ ಬರೆದಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಹುಡುಗಿ ಚಾಮರಾಜನಗರದ ಗುಂಡ್ಲುಪೇಟೆಯವಳಾಗಿದ್ದಾಳೆ, ಇವರಿಬ್ಬರಿಗೆ ಬೆಂಗಳೂರಿನಲ್ಲಿ ಕಳೆದ 7 ತಿಂಗಳ ಹಿಂದೆ ಪ್ರೇಮಂಕುರವಾಗಿತ್ತು. ಕಳೆದ ತಿಂಗಳು ಹುಡುಗಿಗೆ ಬೇರೆಯವರೊಂದಿಗೆ ವಿವಾಹವಾಗಿತ್ತು. ಇದರಿಂದ ನೊಂದು ಪ್ರಿಯಕರ ಆತ್ಮಹತ್ಯೆ ಶರಣಾಗಿದ್ದ. ಈ ಮೂಲಕ ಸಾವಿನಲ್ಲೂ ಪ್ರೇಮಿಗಳಿಬ್ಬರು ಒಂದಾಗಿದ್ದಾರೆ.

LEAVE A REPLY

Please enter your comment!
Please enter your name here