ಸಾರಿಗೆ ಸಂಸ್ಥೆಗಳಿಗೆ ಭಾರೀ ನಷ್ಟ

0
168

 
ಬೆಂಗಳೂರು ಪ್ರತಿನಿಧಿ ವರದಿ
ರಾಜ್ಯಾದ್ಯಂತ ಒಟ್ಟು 92 ಸರ್ಕಾರಿ ಬಸ್ ಗಳ ಮೇಲೆ ಕಲ್ಲೆಸೆತವಾಗಿದೆ. ಕಲ್ಲೆಸೆತದಿಂದಾಗಿ ಸಾರಿಗೆ ಸಂಸ್ಥೆಗಳಿಗೆ 8, 97, 300ರೂ. ನಷ್ಟವಾಗಿದೆ. ಇದರಿಂದ 4 ಸಾರಿಗೆ ಸಂಸ್ಥೆಗಳಿಗೆ ಭಾರೀ ನಷ್ಟ ಉಂಟಾಗಿದೆ. ಕಿಡಿಗೇಡಿಗಳ ಪುಂಡಾಟಿಕೆಗೆ ಸಾರ್ವಜನಿಕ ಅಸ್ತಿಪಾಸ್ತಿ ಹಾನಿಯಾಗಿದೆ.
 
 
 
ರಾಜ್ಯದಲ್ಲಿ 49 ಕೆ ಎಸ್ ಆರ್ ಟಿಸಿ ಬಸ್ ಗಳ ಮೇಲೆ ಕಲ್ಲೆಸತ ನಡೆದಿದೆ. ಇದರಿಂದ ಕೆಎಸ್ ಆರ್ ಟಿಸಿ ಗೆ 4, 80, 300 ರೂಪಾಯಿ ನಷ್ಟವಾಗಿದೆ.
 
 
ಬೆಂಗಳೂರಲ್ಲಿ 4 ಬಿಎಂಟಿಸಿ ಬಸ್ ಗಳ ಮೇಲೆ ಕಲ್ಲುತೂರಾಟ ನಡೆದಿದೆ. ಕಲ್ಲುತೂರಾಟದಿಂದ ಬಿಎಂಟಿಸಿಗೆ 27 ಸಾವಿರ ರೂ. ನಷ್ಟವಾಗಿದೆ.
 
ವಾಯುವ್ಯ ಸಾರಿಗೆ ಸಂಸ್ಥೆಯ 12 ಬಸ್ ಗಳ ಮೇಲೆ ಕಲ್ಲೆಸೆತವಾಗಿದೆ. ಇದರಿಂದ ವಾಯುವ್ಯ ಸಾರಿಗೆ ಸಂಸ್ಥೆ 1.42 ಲಕ್ಷ ರೂ. ನಷ್ಟವಾಗಿದೆ. ಈಶಾನ್ಯ ಸಾರಿಗೆ ಸಂಸ‍್ಥೆಯ 27 ಬಸ್ ಗಳ ಮೇಲೆ ಕಲ್ಲೆಸೆತವಾಗಿದ್ದು, ಈಶಾನ್ಯ ಸಾರಿಗೆ ಸಂಸ್ಥೆಗೆ 2.48ಲಕ್ಷ ರೂ. ನಷ್ಟವಾಗಿದೆ.

LEAVE A REPLY

Please enter your comment!
Please enter your name here