ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಸಾಧನೆ!

0
13581

ಭಾರತ ದೇಶದ ಬದಲಾವಣೆಯಲ್ಲಿ ಮೋದಿಕೇರ್ ಕೊಡುಗೆ ಅಪಾರವಿದೆ -‌ ರವೀಂದ್ರ ಶ್ರೀಯಾನ್

ವಾರ್ತೆ ವಿಶೇಷ: ಹರೀಶ್‌ ಕೆ.ಆದೂರು

ಮೆಟ್ಟು ಮೆಟ್ಟಿಗೆ ಆಘಾತ…ಹಂತ ಹಂತಕ್ಕೂ ಛೀಮಾರಿ… ಸಮಾಜ ನೋಡುವ ದೃಷ್ಟಿಯೇ ಬೇರೆ… ಅನುಭವಿಸದ ಕಷ್ಟಗಳಿಲ್ಲ…ಪಡಬಾರದ ಪಾಡಿಲ್ಲ… ಹೀಗಿದ್ದಾಗಲೂ ಏನಾದರೊಂದು ಸಾಧಿಸಬೇಕೆಂಬ ಅಪಾರ ಛಲ…ಹಂಬಲ… ಜೀವನದಲ್ಲಿ ಅನುಭವಿಸುವ ಪ್ರತಿಯೊಂದು ಕಷ್ಟಗಳೇ ಮುಂದಿನ ಸುಗಮ ಹಾದಿಗೆ ದೊಡ್ಡ ಮೆಟ್ಟಿಲುಗಳು ಎಂಬುದನ್ನು ಸಾಧಿಸಿದ ವೀರ.
ಹೌದು…ಅದೆಷ್ಟೋ ಮಂದಿಯ ಬಾಳಲ್ಲಿ ʻಬೆಳಕು ಆರಿʼ ಹೋಗುವ ಸಂದರ್ಭದಲ್ಲಿ ಜೀವನದಲ್ಲಿ ಆಶಾಕಿರಣ ತೋರಿದ ಅದ್ಭುತ ವ್ಯಕ್ತಿ. ಜೀವನದಲ್ಲಿ ಸೋತು ಸುಣ್ಣವಾಗಿ ಇನ್ನೇನು ʻಆತ್ಮಹತ್ಯೆʼಯೇ ಬಾಕಿ ಎಂಬವರಿಗೂ ʻಅಲ್ಲ…ಇಲ್ಲಿದೆ ವ್ಯವಸ್ಥೆʼ ಎಂದು ʻದಾರಿ ತೋರಿದʼ ನಿಜಾರ್ಥದ ಆದರ್ಶ ವ್ಯಕ್ತಿ. ಇವರು ಇನ್ಯಾರೂ ಅಲ್ಲ… ಕೆಚ್ಚೆದೆಯ ಯುವಕ…ಹಲವರ ಪಾಲಿನ ಆದರ್ಶವ್ಯಕ್ತಿ…ಯುವಜನತೆಯ ಸ್ಪೂರ್ತಿ ರವೀಂದ್ರ ಶ್ರೀಯಾನ್!

ಹೊಚ್ಚ ಹೊಸ ಬಿ.ಎಂ.ಡಬ್ಲ್ಯೂ ಐಷಾರಾಮಿ ಕಾರಿನೊಂದಿಗೆ ರವೀಂದ್ರ ಶ್ರೀಯಾನ್

ನೋಡಲು ಕಟ್ಟುಮಸ್ತಾದ ದೇಹಪ್ರಕೃತಿ…ಮೃದು ಸ್ವಭಾವ… ಎಲ್ಲರಿಗೂ ಪ್ರೀತಿಯ ʻರವಿಯಣ್ಣʼ…ವಿಶಾಲ ಹೃದಯೀ…ಮೀನುಗಾರಿಕಾ ಹಿನ್ನಲೆಯುಳ್ಳ ಯುವಕ. ತನಗಿಲ್ಲದಿದ್ದರೂ ತೊಂದರೆಯಿಲ್ಲ…ಇತರರು ಸುಖವಾಗಿರಬೇಕೆಂಬ ವಿಶಾಲ ಹೃದಯೀ…ಈ ಕಾರಣಕ್ಕಾಗಿಯೇ ನಂಬಿದ ದೇವರು ಇವರನ್ನು ಬಿಟ್ಟಿಲ್ಲ… ಇಂದು ಇವರೇರಿದ ಎತ್ತರ ಊಹಿಸಲೂ ಸಾಧ್ಯವಿಲ್ಲ!

Advertisement

ಕೇವಲ ಮೂರು ವರುಷಗಳ ಹಿಂದೆ ಲಕ್ಷ ಲಕ್ಷ ಸಾಲದ ಹೊರೆಯನ್ನು ತಲೆಯ ಮೇಲೆ ಹೊತ್ತು ʻಜೀವನವೇ ಭಾರʼ ಎಂಬಂತಹ ಸ್ಥಿತಿಯನ್ನನುಭವಿಸಿದ್ದ ವ್ಯಕ್ತಿ ಇಂದು ಏರಿದ ಎತ್ತರ ಅಗಣಿತ. “ಸಾಧಿಸಿ ತೋರುವ ಛಲ…ಸ್ಪಷ್ಟ ಗುರಿ” ಇದೆರಡೇ ಇವರ ಜೀವನದಲ್ಲಿ ದೊಡ್ಡ ಬದಲಾವಣೆಗೆ ನಾಂದಿ ಹಾಡಿತು. ಕಷ್ಟದ ಸಮಯದಲ್ಲಿ ಕೈ ಹಿಡಿದದ್ದು ದೇಶದ ಅದ್ಭುತ ಶಕ್ತಿಯಾಗಿ ಕೋಟ್ಯಂತರ ಜನರ ಪಾಲಿಗೆ ಬೆಳಕಾಗಿರುವ “ಮೋದಿಕೇರ್” ಎಂಬ ಸಂಜೀವಿನಿ ವ್ಯವಸ್ಥೆ.

ಮೋದಿಕೇರ್ ಎಂದರೆ ಸೋಪು ಮಾರುವ ಕೆಲಸವಲ್ಲ…ಬದಲಾಗಿ ʻಹೋಪ್ʼ ಇರುವ ಬ್ಯುಸಿನೆಸ್..ಎಂಬುದನ್ನು ಸಾಬೀತು ಪಡಿಸಿದ್ದಾರೆ ರವೀಂದ್ರ ಶ್ರೀಯಾನ್. ನೇರ ಮಾರುಕಟ್ಟೆ ವ್ಯವಸ್ಥೆಯ ಮೋದಿಕೇರ್ ಸಂಸ್ಥೆಯ ಹನ್ನೆರಡು ವಿಭಾಗಗಳ ಐದುನೂರಕ್ಕೂ ಮಿಕ್ಕಿದ ದೇಸೀಯ ಉತ್ಪನ್ನಗಳನ್ನು , ಉತ್ಪನ್ನಗಳ ನಿಖರತೆ, ವೈಶಿಷ್ಟ್ಯತೆಯನ್ನು ಜನತೆಗೆ ತಿಳಿಸಿದ ಪ್ರಾಮಾಣಿಕ ಪ್ರಯತ್ನಕ್ಕೆ ರವೀಂದ್ರ ಶ್ರೀಯಾನ್ ಇಂದು ಊಹಿಸಲಸಾಧ್ಯವಾದ ಎತ್ತರಕ್ಕೇರಿದ್ದಾರೆ!. ಕೇವಲ ಮೂರೇ ವರುಷದಲ್ಲಿ ಭಾರತದ ಉದ್ದಗಲದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿ, ಸಾಮ್ರಾಜ್ಯವನ್ನು ಸ್ಥಾಪಿಸುತ್ತಾ, ಯುವಜನತೆಯನ್ನು, ಅವಕಾಶ ವಂಚಿತರನ್ನು ಮೋದಿಕೇರ್ ಜಗತ್ತಿನ ಮೂಲಕ ಮುಖ್ಯವಾಹಿನಿಗೆ ಕೊಂಡೊಯ್ಯುವ ದೊಡ್ಡ ಕ್ರಾಂತಿಯನ್ನು ಮಾಡಿದರು.

ಬಿ.ಎಂ.ಡಬ್ಲ್ಯೂ ಪಡೆದುಕೊಂಡ ಸಾರ್ಥಕ ಕ್ಷಣ…

ದುಡಿಯಲು ಆಸಕ್ತಿ ಇರುವವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು , ಸಾಧನೆಯ ಹಾದಿಯನ್ನು ನಿಖರವಾಗಿ ತಿಳಿಸಿದ ರವೀಂದ್ರ ಶ್ರೀಯಾನ್‌ ಪ್ರಸ್ತುತ ಮೋದಿಕೇರ್‌ ನ ಕ್ರೌನ್‌ ಡೈಮಂಡ್‌ ಡೈರೆಕ್ಟರ್.‌ ವರುಷದ ಹಿಂದೆ ೨೩ಲಕ್ಷದ ಐಷಾರಾಮೀ ಟಾ.ಟಾ. ಹ್ಯಾರಿಯರ್‌ ಕಾರಿನೊಂದಿಗೆ ಮೂರು ಲಕ್ಷಕ್ಕೂ ಮಿಕ್ಕಿದ ಆದಾಯವನ್ನು ಪ್ರತೀ ತಿಂಗಳು ಪಡೆದುಕೊಂಡು ʻಮೋದಿಕೇರ್‌ ನಲ್ಲಿ ಲಕ್ಷ ಲಕ್ಷ ʼ ಸಂಪಾದನೆ ಸಾಧ್ಯ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಇದೀಗ ೬೦ಲಕ್ಷದ ಬಿ.ಎಂ.ಡಬ್ಲ್ಯು ಕಾರಿನ ಒಡೆಯನಾಗುವ ಮೂಲಕ ಸಾಮಾನ್ಯರೂ ಅಸಾಮಾನ್ಯವಾಗಿ ಬೆಳೆಯಬಲ್ಲರು ಎಂಬುದನ್ನು ಸಾಕ್ಷೀಕರಿಸಿದ್ದಾರೆ.

ತಾನೊಬ್ಬ ಬೆಳೆದರೆ ಸಾಲದು…ತನ್ನೊಂದಿಗಿರುವವರನ್ನೂ ಬೆಳೆಸಬೇಕು ಎಂಬುದು ರವೀಂದ್ರ ಶ್ರೀಯಾನ್‌ ಅವರ ಬಲವಾದ ನಂಬಿಕೆ. ಈ ಕಾರಣಕ್ಕಾಗಿಯೇ ಅವರ ತಂಡದಲ್ಲಿ ಸರಿ ಸುಮಾರು ಇಪ್ಪತ್ತಕ್ಕೂ ಅಧಿಕ ಐಷಾರಾಮಿ ಕಾರುಗಳು , ಇಪ್ಪತ್ತಕ್ಕೂ ಅಧಿಕ ಮಂದಿ ಲಕ್ಷಾಧೀಶ್ವರರು ಇಂದು ಮೂಡುವಂತಾಗಿದೆ.

” ಅವಕಾಶ ವಂಚಿತರಿಗೆ ಈ ದೇಶದಲ್ಲಿ ಅವಕಾಶ ವಿದೆ; ಮೋದಿಕೇರ್‌ ವ್ಯವಸ್ಥೆಯಲ್ಲಿ ಕಷ್ಟಪಟ್ರೆ ಎಲ್ಲವನ್ನೂ ಪಡೆಯಬಹುದು, ಎಂತಾ ಕಡುಬಡವನೂ ಶ್ರೀಮಂತನಾಗಬಹುದು ಎನ್ನುತ್ತಾರೆ ರವೀಂದ್ರ ಶ್ರೀಯಾನ್.‌ ಭಾರತ ದೇಶದ ಬದಲಾವಣೆಯಲ್ಲಿ ಮೋದಿಕೇರ್ ಕೊಡುಗೆ ಅಪಾರವಿದೆ ಎನ್ನುವ ಅವರು ಕಷ್ಟಪಡಲು ಯಾರು ಸಿದ್ಧರಿದ್ದಾರೋ ಅವರ ಜೊತೆ ನಾವು ನಿಲ್ಲುತ್ತೇವೆ ಎಂದು ʻವಾರ್ತೆ.ಕಾಂʼಗೆ ತಿಳಿಸಿದ್ದಾರೆ. ಅವರ ಸಾಧನೆ ಇನ್ನಷ್ಟು ಬೆಳೆಯಲಿ ಬೆಳಗಲಿ ಎಂಬುದೇ ನಮ್ಮ ಆಶಯ…

ಮೋದಿಕೇರ್‌ ವ್ಯವಸ್ಥೆಗೆ ಸೇರಲಿಚ್ಛಿಸುವವರು ಸಂಪರ್ಕಿಸಿ… 9901463124

LEAVE A REPLY

Please enter your comment!
Please enter your name here