ಸಾಧುಗಳ ಹಿಂಸಾ ಹತ್ಯ ಖಂಡನೀಯ: ಕೇಮಾರು ಶ್ರೀ

0
443

ವಾರ್ತೆ ವರದಿ ಮೂಡುಬಿದಿರೆ

ಮೂಡುಬಿದಿರೆ: ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯಲ್ಲಿ ಸಾಧುಗಳು ಹಾಗೂ ಅವರ ವಾಹನ ಚಾಲಕರನ್ನು ನಿರ್ದಾಕ್ಷಿಣ್ಯವಾಗಿ ಹಿಂಸಿಸಿದ ಘಟನೆಯನ್ನು ಮೂಡುಬಿದಿರೆ ಸಮೀಪದ ಕೇಮಾರು ಸಾಂದೀಪನೀ ಸಾಧನಾಶ್ರಮದ ಶ್ರೀಶ್ರೀಶ್ರೀ ಈಶವಿಠಲದಾಸ ಸ್ವಾಮೀಜಿ ತೀವ್ರವಾಗಿ ಖಂಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದೆಂದೂ ನಮ್ಮ ದೇಶದಲ್ಲಿ ಈ ರೀತಿಯ ಕೃತ್ಯಗಳು ನಡೆಯದಂತೆ ಆಳುವ ವರ್ಗ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದ್ದಾರೆ.


ಇದೊಂದು ದೊಡ್ಡ ಕ್ರೌರ್ಯ ಎಂದವರು ಹೇಳಿದ್ದಲ್ಲದೆ, ಪುಣ್ಯ ಭೂಮಿ ಭಾರತದಲ್ಲಿ ಇಂತಹ ಕುಕೃತ್ಯಗಳು ನಡೆಯಲೇ ಬಾರದು ಎಂದು ಆಗ್ರಹಿಸಿದ್ದಾರೆ. ದೇಶದ ಸತ್ಪ್ರಜೆಗಳು , ನಾಗರೀಕರ ಸಮಾಜ , ಧಾರ್ಮಿಕ ಭಾವನೆಗಳುಳ್ಳ ಸಮಾನ ಮನಸ್ಕರು , ಸಾಧು ಸಂತರು ಒಗ್ಗಟ್ಟಾಗಿ ಇದರ ವಿರುದ್ಧ ಧ್ವನಿಯಾಗುವ ಅವಶ್ಯಕತೆಯಿದೆ ಎಂದಿದ್ದಾರೆ. ಸರಕಾರ, ಪೊಲೀಸ್‌ ಇಲಾಖೆ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗುವಂತೆ ಮಾಡಬೇಕೆಂದು ಆಗ್ರಹಿದ್ದಾರೆ.

LEAVE A REPLY

Please enter your comment!
Please enter your name here