ಸಾಧನ ಸಲಕರಣೆಗಳ ವಿತರಣೆ

0
422

ಮೂಡಬಿದಿರೆ ಪ್ರತಿನಿಧಿ ವರದಿ
ಸರ್ವಶಿಕ್ಷಾ ಅಭಿಯಾನ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಮೂಡಬಿದಿರೆ ವಲಯ ಇದರ ಆಶ್ರಯದಲ್ಲಿ ವಿಶೇಷ ಮಕ್ಕಳ ಸಾಧನಾ ಸಲಕರಣೆ ವಿತರಣಾ ಕಾರ್ಯಕ್ರಮ ಮೂಡುಬಿದಿರೆಯ ಬಿ.ಆರ್.ಸಿ.ನಲ್ಲಿ ಮಂಗಳವಾರ ನಡೆಯಿತು.
 
mood_salakarane_vitarane1
 
ಶಾಸಕ ಕೆ.ಅಭಯಚಂದ್ರ ಜೈನ್ ಅರ್ಹ ಮಕ್ಕಳಿಗೆ ಸಲಕರಣೆಗಳನ್ನು ವಿತರಿಸಿ ಸದ್ ವಿನಿಯೋಗ ಮಾಡುವಂತೆ ಆಶಿಸಿದರು. 1ರಿಂದ 8ನೇ ತರಗತಿಯ ಅರ್ಹ ವಿದ್ಯಾರ್ಥಿಗಳಿಗೆ ಸರ್ವಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ 64 ವಿವಿಧ ಸಲಕರಣೆಗಳನ್ನು ಹಾಗೂ 9 ಮತ್ತು 10ನೇ ತರಗತಿಯ ಅರ್ಹ ವಿಶೇಷ ಮಕ್ಕಳಿಗೆ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯಡಿ 15ಸಲಕರಣೆಗಳನ್ನು ವಿತರಿಸಲಾಯಿತು.
 
 
 
ಈ ಸಂದರ್ಭದಲ್ಲಿ ಸಮನ್ವಯ ಅಧಿಕಾರಿ ರಮೇಶ್ ಆಚಾರ್ ಬಿ ಜಿ, ಬಿ.ಆರ್.ಪಿ ಗೀತಾ, ಸರ್ವಶಿಕ್ಷಣ ಅಭಿಯಾನದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here