ಸಾಗರಸ್ಸಾಗರೋಪಮಾ

0
506

ಮಸೂರ ಅಂಕಣ: ಆರ್ ಎಂ ಶರ್ಮ
ತಲೆಬರಹ ಸಂಸ್ಕೃತದ ಒಂದು ಪ್ರಸಿದ್ಧವಾಣಿ.
ಇದರ ಅಥ೯- “ಸಾಗರಕ್ಕೆ ಸಾಗರವೇ ಉಪಮೆ”.
ಅಂದರೆ ಸಮುದ್ರಕ್ಕೆ ಹೋಲಿಕೆ ಸಮುದ್ರವೇ ಎಂತ ಅಷ್ಟೇ.
ಹೋಲಿಕೆಯ ಸಂಗತಿ ಕೆಲ ಸಂಗತಿಗಳನ್ನು,ಸನ್ನಿವೇಶಗಳನ್ನು,ಸಂದಭ೯ಗಳನ್ನು ತೌಲನಿಕವಾಗಿ ತಿಳಿಯಲು,ತಿಳಿಸಲು ಬಳಸುವ ಒಂದು ಪರಿಪಾಠ ಅನೂಚಾನವಾಗಿ ವ್ಯವಹಾರದಲ್ಲಿ ಬೆರೆತುಕೊಂಡಿದೆ.
ಹೀಗೇ ಮೊದಲೂ ಇತ್ತು.
ಮುಂದೂ ಇರುತ್ತದೆ.
ಕನ್ನಡದ ತೌಲನಿಕ ಎಂಬುದಕ್ಕೆ ಇಂಗ್ಲಿಶ್ನಲ್ಲಿ-“ಕಂಪಾರಿಸನ್” ಎಂತ ಹೇಳುತ್ತಾರೆ
ಸಾಗರ ವಿಶಾಲ,ಆಳ-ಕಣ್ಣಿಗೆ ಕಾಣಿಸುವಷ್ಟೂ ದೂರಕ್ಕೆ ನೀರೇ ನೀರು.
ಸಮುದ್ರದ ಒಳಗಡೆ ಸಂಪತ್ತಿನ ಗಣಿ ಇದೇ ಸಮುದ್ರದ ಗುಣ.
ಸಮುದ್ರಕ್ಕೆ-“ರತ್ನಾಕರ”-ಎಂತಲೂ ಕರೆಯುವುದು ಒಂದು ರೀತಿ-ರಿವಾಜು.
ಈ ರತ್ನಕ್ಕೆ-ಮಿತಿ ಇಲ್ಲ.
ಎಲ್ಲ ರೀತಿಯ ಬೆಲೆಯುಳ್ಳ ಸತ್ವ-ಸತ್ಯ ಅಲ್ಲಿ.
ರಾಮಾಯಣದ ಯುದ್ಧ-ರಾಮ-ರಾವಣರ ಕಾಳಗ.
ಇದರೆ ಒಂದು ನೋಟ-ಭೀಕರತೆ,ವ್ಯಾಪ್ತಿ,ಪರಿಣಾಮ ಇವನ್ನೆಲ್ಲಾ ಕಾವ್ಯಕಾರನು ಹೇಳುವಾಗ-
“ರಾಮ ರವಣೋಯು೯ದ್ಧಮ್-ರಾಮರಾವಣೋರಿಯಂ”-ಎನ್ನುತ್ತಾನೆ.
ಕಾರಣ-“ಗಗನಂ ಗಗನಾಕಾರಂ,ಸಾಗರಸ್ಸಾಗರೋಪಂ”-ಎಂತ ಹೋಲಿಕೆ ಹೇಳುತ್ತಾನೆ.
ಗಗನ-ಆಕಾಶ-ಎತ್ತರ,ವೈಶಾಲ್ಯ ಇದಕ್ಕೆ ಹೋಲಿಕೆ ಗಗನವೇ.
ಒಂದಥ೯ದಲ್ಲಿ ಪರಾತ್ಪರಕ್ಕೆ ಯಾರು-ಏನು ಸಮ ಎಂದರೆ-ಪರಾತ್ಪರವೇ.
ಸಾಗರ-ಸಾಹಸಕ್ಕೆ,ಜೀವನಕ್ಕೆ,ಸಾರಿಗೆಗೆ,ತಂಟೆಗೆ-ತಕರಾರಿಗೆ,ಅನ್ವೇಷಣೆಗೆ,ಯುದ್ಧಕ್ಕೆ ಅಗತ್ಯವೇ.
ಎಲ್ಲರಿಗೂ ತಿಳಿದಿರುವಂತೆ-ಸಾಗರವು-ಮೀನಿನ-ಬೆಸ್ತರ ಜೀವನಾಡಿ
ಜನಗಳ,ಪದಾಥ೯ಗಳ ಸಾಗಾಟಕ್ಕೂ ಸಾಗರ ಸಿದ್ಧ.
ಸಾಗರ ಒಡಲಿನಲ್ಲಿ-ಪೆಟ್ರೋಪದಾಥ೯ಗಳ ಸಂಪತ್ತು ಅದರ ಗಣಿಕಾರಿಕೆಗೂ ಪ್ರಶಸ್ತ.
ಸಾಗರಾಳದಲ್ಲಿ ಅನೇಕ ಅಪುರೂಪದ,ಬೆಲೆಬಾಳುವ ಖನಿಜಗಳ ನಿಕ್ಷೇಪವಿದೆ ಎಂಬುದಕ್ಕೆ ಆಧಾರ ಉಂಟು.
ಹಾಗಾಗಿ ಸಮುದ್ರಕ್ಕೆ ಭಾರತದ ಆಷೇ೯ಯಗ್ರಂಥಗಳು-“ರತ್ನಾಕರ”-ಎಂಬ ಹೆಸರನ್ನು ನೀಡಿದ್ದಾರೆ.
ಭಾರಿಜನಸೇರಿದರೆ-ಜನಸಾಗರ ಎನ್ನುತ್ತಾರೆ.
ವಿಶಾಲವಾದ,ಆಳವಾದ,ಘಾಢವಾದ ಸಂಗತಿಗಳಿಗೆ-ವಿಶೇಷವಾಗಿ-ಸಾಹಿತ್ಯ,ಸಂಗೀತ,ನೃತ್ಯ ಇಲ್ಲೆಲ್ಲಾ ಹೇಳುವ ಮಾತು-ಸಾಗರದಂತೆ-ತಿಳಿಯಲು ಕಷ್ಟ,ಕಲಿಯಲು ಕಷ್ಟ ಇತ್ಯಾದಿಗಳಿಗೆ ಇದು ಅನ್ವಯವಾಗುತ್ತದೆ.ಆಗರದ ನೀರನ್ನು-ಉಪ್ಪಿನಿಂದ ಮುಕ್ತಿಗೊಳಿಸಿ-ಸಿಹಿಮಾಡಿ ಮನುಷ್ಯಜೀವನಕ್ಕೆ ಅಣಿಯಾಗುವಂತೆ-ಕುಡಿಯಲು,ಅಡುಗೆಗೆ ಬಳಸಲು ಅನೇಕ ಪ್ರಯೋಗ,ಪ್ರಾಯೋಜನ ನಡೆದದ್ದೇ ಸತ್ಯ.
ಈ ಮಾತಿಗೆ-“ಡಿಸಾಲಿನೇಶನ್”-ಎಂತ ಹೇಳುತ್ತಾರೆ.
ಮಳೆಯನೀರು ಸಾಗರಕ್ಕೆ ಹರಿಯುವುದನ್ನು ಮೂದಲಿಸುವ ಬುದ್ಧಿವಂತ ಜನರಿಗೆ ಬರವಿಲ್ಲ.
ಸಾಗರವಿಲ್ಲದಿದ್ದರೆ-ಮೋಡವೆಲ್ಲಿ?
ಮೋಡವಿಲ್ಲದಿದ್ದರೆ ಮಳೆಯೆಲ್ಲಿ?
ಪರಾತ್ಪರ-ಸಾಗರಶಯನ.
ಚಿಂತನ ಮಂಥನ ಇಲ್ಲಿ ಕಳಶದ ಮಾತು ಸಮುದ್ರಮಂಥನ.
ಹನುಮನ ಹಾರಾಟ-ಸಾಗರೋಲ್ಲಂಘನ.
ನಮ್ಮ ಪೌರಾಣಿಕ ಆಕರಗಳ ಪ್ರಕಾರ-ಸಪ್ತಸಾಗರ-ಸಾಗರದ ಮಹಿಮೆ-ಸಡಗರ ಇಲ್ಲಿ ಸ್ಮರಣೀಯ.
ಭಾರತದ ಮೂರು ಬದಿಯಲ್ಲಿ ಸಾಗರವೇ ಗಡಿ.
ಇಷ್ಟಾದರೂ ಸಾಗರದ ಮೇಧಾ ಬೋಧವಾಗಲಿಲ್ಲ-ಭೋಗವಾಯಿತು.
ಏನೀ ವಿಪಯಾ೯ಸ.
ಸಧ್ಯಃ ಸಾಗರ ಕಥೆ ಅಲ್ಲಿಗೇ ಬಿಟ್ಟು ತಥ್ಯಕ್ಕೆ ಬರೋಣ.
ಒಂದು ಇಂಗ್ಲಿಶ್ ದೈನಿಕದ ಅಧಾರದಲ್ಲಿ ಹೇಳುವುದಾದರೆ, ಸಾಗರವು ಅಣು ಶಕ್ತಿಗೆ ಬಲ,ಬಂಡವಾಳ.
ಪಶ್ಚಿಮದ ನಗರ ಬೋಸ್ಟನ್ ನ ಬುದ್ಧಿವಂತರು,ಪರಿಣಿತರು ಸಂಶೋಧನೆ ನಡೆಸಿ-ಸಾಗರದಲ್ಲಿ ಅಣುಶಕ್ತಿ ಉತ್ಪಾದನೆಗೆ ಬೇಖದ-“ಉರೇನಿಯಂ”-ಖನಿಜದ ಲಭ್ಯತೆಯನ್ನು ಸ್ಥಿರಪಡಿಸಿದ್ದಾರೆ.
ಸಧ್ಯಃ ಭೂಮಿಯಮೇಲಿನ ಗಣಿಗಳಲ್ಲಿ ಅಗೆದು ಈ ಖನಿಜವನ್ನು ಪಡೆದುಕೊಳ್ಳುತ್ತಿರುವುದು ಬಗ್ಗೆ ಮುಂದುವರೆದ ಅಧ್ಯನ ನಡೆಸಿದೆ.ಚಾಲ್ತಿಕ್ರಮ.
ಸದರಿ ಅನ್ವೇಷನೆಯ ಪ್ರಕರ ಸಮುದ್ರದ ನೀರಿನಲ್ಲಿ ಉರೇನಿಉಮ್ ಸತ್ವ ನೀರಿನಲ್ಲಿ ಕರಗಿ ಅದರ ಅಯಾನ್ ಗಳಾಗಿ ಲಭ್ಯ.
ಈ ಅಯಾನ್ ಗಳನ್ನು ಶೇಖರಿಸಲು ಪ್ಲಾಸ್ಟಿಕ್ ಕಡ್ಡಿಗಳಿಗೆ ಒಂದು ಪ್ರಶಸ್ತವಾದ ರಾಸಾಯನಿಕವನ್ನು ಲೇಪಮಾದಿ ಅವನ್ನು ಸಮುದ್ರದ ನೀರಿನಲ್ಲಿ ಮುಳುಗಿಸುವುದು.
ಈ ಕಡ್ಡಿಗಳಿಗೆ ಉರೇನಿಯಮ್ ಅಯಾನ್ಗಳು ಅಂಟಿಕೊಂಡು ಮುಂದಿನಬಳಕೆಗೆ ಸಹಾಯಮಾಡುತ್ತದೆ.
ಭೂಮಿಯಮೇಲೆ ಅವನ್ನು ತಂದು ನಂತರ ಸೂಕ್ತವಾಗಿ ಪರಿಷ್ಕರಿಸಿ-ಅಣು ರೀಆಕ್ಟರ್ಗಳಲ್ಲಿ ಬಳಸಲು ಸಿದ್ಧಪಡಿಸುವುದು ವಾಣಿಜ್ಯಕ ವ್ಯವಹಾರ.
ಮತ್ತೋದು ಗುಂಪು-ಸ್ತಾನ್ಫ಼ೋರ್ಡ್ ನದು ಮತ್ತೂ ಹೆಚ್ಚಿನ ಸಂಶೋಧನೆ ನಡೆಸಿ-ಸದರಿ ನೀರಿನಲ್ಲಿ ಮುಳುಗಿಸುವ ಕಡ್ಡಿಗಳ ಕಾಯ೯ಕ್ಷಮತೆ,ಮರುಬಳಕೆ
,ಹಿಡಿದುಕೊಳ್ಳುವ ವೇಗ ಇವನ್ನು ಅಧ್ಯನಮಾಡಿ ಗೆದ್ದಿದೆ.
ಆಳಸಮುದ್ರದಲ್ಲಿ ಮುಳುಗಿಸುವ ಕಡ್ಡಿಗಳಿಗೆ ಮೇಲಿನಿಂದ ವಿದ್ಯುತ್ ಹರಿಸಿ ಅದರೆ ಕೌಶಲ್ಯವನ್ನು ವಧಿ೯ಸಿದೆ.
ಇನ್ನೂ ಮುಂದುವರೆದ ಅಧ್ಯಯನ,ಅಭ್ಯಾಸ,ಪ್ರಯೋಗ,ಪರಿಶ್ರಮ-ಹೀರುವಕಡ್ಡಿಗಲು ಸಾಂದ್ರವಾಗುವ ಮೊದಲು(ಸಾಟುರೇಶನ್),-ಸಾಮಾನ್ಯಕಡ್ಡಿಗಳಿಗಿಂತ ೯ ಪಟ್ಟು ಅಧಿಕ ಸಂಗ್ರಹವಾಗುವಂತೆ ಕೆಲಸ ಮಾಡುವದನ್ನು ನಿಶ್ಚಯಗೊಳಿಸಲ್ಪಟ್ಟಿದೆ.
ಇಲ್ಲಿ-ಸಮಯ,ಹಣ ಎಲ್ಲಾ ಬಹಳ ಉತ್ತಮವಾದ ಕೊಡುಗೆಗಳನ್ನು ನೀಡಿದಂತಾಯಿತು.
ಅಂದಮಾತ್ರಕ್ಕೆ ಇದೇನು ಪರಮೋತ್ಕೃಷ್ಟ ಎಂತಲ್ಲವಂತೆ-ಕಾರ್‍ಅನ ಸಮುದ್ರದ ನೀರಿನಲ್ಲಿ ಅಡಗಿರುವ ಉರೇನಿಯಮ್ ಪ್ರಮಾನ ಅತ್ಯಲ್ಪ.
ಇದನ್ನೇ ಖಂಡಿತವಾಗಿ ಉರೇನಿಯಮ್ ಮೂಲ ಎನ್ನಲಾಗದು.
ಭೂಮಿಯ ಮೇಲಿನ ಲಭ್ಯತೆಗೆ ಸಹಾಯ-ಸಹಕಾರ ಅಷ್ಟೇ.
ಕನ್ನಡದ ಗಾದೆಮಾತಿನಂತೆ-ಪರಸ್ಪರ ಸಂಭಂಧ ಅನನ್ಯ-ಅನ್ಯೋನ್ಯ-ಮಾನ್ಯ.
ಬಹಳಬೆಲೆಯುಳ್ಳ ಖನಿಜ ಎಷ್ಟು ದಕ್ಕಿದರೂ ಅಷ್ಟು ಉತಮವಲ್ಲವೇ?
ಇದೇ ತಕ೯ ಇಲ್ಲಿ ಸುಸಂಪನ್ನ.
ಅಪರಿಮಿತ ಜನಸಂಖ್ಯೆ,ಅಪರಿಮಿತ ಶಕ್ತಿಯ ಬೇಡಿಕೆ,ಲಭ್ಯ ಸಂಪನ್ಮೂಲಗಳ ಕೊರತೆ/ಮಿತಿ ಇಲ್ಲೆಲ್ಲಾ ಅನ್ಯ ಮಾಗ೯,ಅನ್ಯ ಸಂಪಾದನೆ ಇವೆಲ್ಲಾ ಹಿತವೇ-ಜನಮತವೇ-ಜಾಣತನವೇ.
ನಮ್ಮ ಭಾರತೀಯ ದೃಷ್ಟಿಯಲ್ಲಿ-ಸಮುದ್ರ ರಾಜನೂ ಕೂಡಾ.
ಸಮುದ್ರರಾಜ ಪ್ರಜಾ ಹಿತಕ್ಕೆ ಮಣಿದರೆ-ದುಡಿದರೆ ಹಿರಿದಲ್ಲವೇ?
ಅದಕ್ಕೇ ನಾವು ಶುರುವಿಗೇ ಹೇಳಿದ ಮಾತು-ಸಮುದ್ರಕ್ಕೆ ಸಮುದ್ರವೇ ಉಪಮಾನ.
ಇನ್ನೂ ಬೇಕೆ ಅನುಮಾನ.
ಪರಮಾತ್ಮನ ಮಾತಿಗೇ ಬಂದರೆ-
“ಸಂಶಯಾತ್ಮಾ ವಿನಶ್ಯತಿ”.
ಆರ್.ಎಂ.ಶಮ೯

LEAVE A REPLY

Please enter your comment!
Please enter your name here