ಸಾಕ್ಷಿ ಮಲ್ಲಿಕ್ ಗೆ ನಿಶ್ಚಿತಾರ್ಥ

0
225

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ರಿಯೋ ಒಲಿಂಪಿಕ್ಸ್‌‌ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟಿರುವ ಕುಸ್ತಿಪಟು ಸಾಕ್ಷಿ ಮಲಿಕ್‌‌‌ ವರ್ಷವೇ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ.
 
 
ಸಾಕ್ಷಿ ಮಲಿಕ್‌‌‌‌‌‌‌ ತಮ್ಮ ಗೆಳೆಯ ಹಾಗೂ ಕುಸ್ತಿಪಟು ಸತ್ಯವೃತ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಜೋಡಿಯ ಕುಟುಂಬದ ಸದಸ್ಯರು ಈ ವೇಳೆ ಉಪಸ್ಥಿತರಿದ್ದರು. ರೋಹ್ಟಕ್‌ನಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿದ್ದು, ಆದಷ್ಟು ಬೇಗ ಮದುವೆ ದಿನಾಂಕ ಘೋಷಣೆ ಮಾಡಲಾಗುವುದು ಅಂತಾ ಕುಟುಂಬಸ್ಥರು ತಿಳಿಸಿದ್ದಾರೆ.
 
 
23 ವರ್ಷದ ಸಾಕ್ಷಿ ಮಲಿಕ್‌‌ ಇದೇ ವರ್ಷ ತನಗಿಂತ ಒಂದು ವರ್ಷ ಚಿಕ್ಕವನಾಗಿರುವ ಕುಸ್ತಿಪಟು ಸತ್ಯವೃತ್ ಕಾದಿಯಾನ್‌ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

LEAVE A REPLY

Please enter your comment!
Please enter your name here