ಸಾಂಬ್ರಾಣಿ ಎಲೆಯ ಸಾರು

0
327

 
ಬೇಕಾಗುವ ಸಾಮಗ್ರಿಗಳು:
2 ಹಿಡಿ ಸಾಂಬ್ರಾಣಿ ಎಲೆ, 1 ಈರುಳ್ಳಿ, 2 ಚಮಚ ತುಪ್ಪ, ಉದ್ದು, 1ಚ.ಅರಿಸಿನ, ಸಾಸಿವೆ, ಜೀರಿಗ, ಎಣ್ಣೆ, 3 ಕೆಂಪು ಮೆಣಸು, :4 ಚಮಚ ಹುಣಸೆ ರಸ, ರುಚಿಗೆ ತಕ್ಕಷ್ಟು ಬೆಲ್ಲ, ಉಪ್ಪು.
 
 
ಬೇಕಾಗುವ ಸಾಮಾಗ್ರಿಗಳು:
ಮೊದಲಿಗೆ ಈರುಳ್ಳಿ ಹಾಗೂ ಸಾಂಬ್ರಾಣಿ ಎಲೆಗಳನ್ನು ತುಪ್ಪದಲ್ಲಿ ಹುರಿದುಕೊಳ್ಳಿ. ನೀರಿಗೆ ಹುರಿದ ಈರುಳ್ಳಿ ಹಾಗೂ ಸಾಂಬ್ರಾಣಿ ಎಲೆಗಳನ್ನು ಸೇರಿಸಿ, ಕುದಿಯಲು ಬಿಡಿ. ಇದಕ್ಕೆ ಹುಣಸೆ ರಸ ಹಾಗೂ ಬೆಲ್ಲವನ್ನು ಸೇರಿಸಿ. ಕುಡಿಯುತ್ತ ಬಂದಂತೆ ಉಪ್ಪನ್ನು ಹಾಕಿ ಮತ್ತೆ ಕುದಿಸಿ. ನಂತರ ಎಣ್ಣೆ, ಮೆಣಸು, ಉದ್ದು, ಅರಿಸಿನ, ಸಾಸಿವೆ, ಜೀರಿಗೆ ಇವುಗಳನ್ನು ಹಾಕಿ ಒಗ್ಗರಣೆ ಕೊಡಿ. ಈ ಸಾರು ಬಹಳ ರುಚಿ. ಅನ್ನಕ್ಕೆ ಬಹಳ ಒಳ್ಳೆಯ ಜತೆ.

LEAVE A REPLY

Please enter your comment!
Please enter your name here