ಸಾಂಪ್ರದಾಯಿಕ ನಗಾರಿ ಭಾರಿಸಿದ ಪ್ರಧಾನಿ

0
552

 
ವರದಿ: ಲೇಖಾ
ಆಫ್ರಿಕದ ನಾಲ್ಕು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಡ ರಾತ್ರಿ ತಾಂಜಾನಿಯಾಕ್ಕೆ ಭೇಟಿ ನೀಡಿದ್ದು, ಅಲ್ಲಿ ಪ್ರಧಾನಿ ಮೋದಿಯವರಿಗೆ ಅದ್ದೂರಿ ಸ್ವಾಗತ ನಿಡಲಾಗಿದೆ.
 
 
ಈ ವೇಳೆ ತಾಂಜಾನಿಯ ಅಧ್ಯಕ್ಷ ಡಾ. ಜಾನ್ ಮಗುಫುಲಿ ಅವರನ್ನು ಮೋದಿ ಭೇಟಿ ಮಾಡಿದರು. ಈ ಭೇಟಿಯ ಸಂದರ್ಭದಲ್ಲಿ ಮಗುಫುಲಿ ಅವರು ಮೋದಿ ಅವರಿಗೆ ತಾಂಜಾನಿಯದ ಸಾಂಪ್ರದಾಯಿಕ ನಗಾರಿಯನ್ನು ಭಾರಿಸಿ ತೋರಿಸಿದರು. ತಕ್ಷಣವೇ ಮೋದಿ ಅವರೂ ತಾಂಜಾನಿಯ ಅಧ್ಯಕ್ಷರ ಜೊತೆಗೆ ನಗಾರಿ ಭಾರಿಸಿದರು.
 
 
ಇದಕ್ಕೆ ಮುನ್ನ ಮೋದಿ ಅವರಿಗೆ ಸಾಂಪ್ರದಾಯಿಕ ಸ್ವಾಗತವನ್ನು ಕೋರಲಾಯಿತು. ಈ ಸಂದರ್ಭದಲ್ಲಿ ಮಕ್ಕಳು ಪ್ರಧಾನಿಯವರತ್ತ ಭಾರತ ಮತ್ತ ತಾಂಜಾನಿಯ ಧ್ವಜಗಳನ್ನು ಪ್ರದರ್ಶಿಸಿದರು.
 
 
ತಾಂಜಾನಿಯದಲ್ಲಿ ಮೋದಿ ಅವರು ಅಧ್ಯಕ್ಷ ಜಾನ್ ಪೊಂಬೆ ಜೋಸೆಫ್ ಮಗುಫುಲಿ ಜೊತೆಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ತಮ್ಮ ಗ್ರಾಮಗಳಲ್ಲಿ ಸೌರ ವಿದ್ಯುತ್ ವ್ಯವಸ್ಥೆ ತಯಾರಿ, ಅಳವಡಿಕೆ, ದುರಸ್ತಿ, ನಿರ್ವಹಣೆಗೆ ಭಾರತ ಸರ್ಕಾರದಿಂದ ತರಬೇತಿ ಪಡೆದ ಆಫ್ರಿಕದ ಮಹಿಳಾ ಸೌರ ಎಂಜಿನಿಯರ್​ಗಳ ಗುಂಪು ‘ಸೋಲಾರ್ ಮಾಮಸ್’ ಅವರ ಜೊತೆಗೂ ಮೋದಿ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here