ಸಾಂಕೇತಿಕ ಪ್ರತಿಭಟನೆ

0
443

ಬೆಂಗಳೂರು ಪ್ರತಿನಿಧಿ ವರದಿ
ಪೆಟ್ರೋಲ್, ಡೀಸೆಲ್ ಮೇಲಿನ ಕಮೀಷನ್ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯ ಪೆಟ್ರೋಲ್ ಮಾಲೀಕರಿಂದ ಸಾಂಕೇತಿಕ ಪ್ರತಿಭಟನೆ ನಡೆಯುತ್ತಿದೆ ಎಂದು ಅಖಿಲ ಕರ್ನಾಟಕ ಪೆಟ್ರೋಲ್ ಮಾಲೀಕರ ಸಂಘದ ಅಧ್ಯಕ್ಷ ರವಿಂದ್ರನಾಥ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
 
 
ಇಂದು ಸಂಜೆ 7ರಿಂದ 7.15ರವರೆಗೆ ಸಾಂಕೇತಿಕ ಧರಣಿ ನಡೆಯುತ್ತದೆ.ಪೆಟ್ರೋಲ್ ಬಂಕ್ ಗಳಲ್ಲಿ ವಿದ್ಯುತ್ ದೀಪ ಆರಿಸಿ ಪ್ರತಿಭಟನ ನಡೆಯುತ್ತದೆ. ನ.3ರಂದು ಪೆಟ್ರೋಲ್ ಬಂಕ್ ಸಂಪೂರ್ಣವಾಗಿ ಬಂದ್ ಆಗಮಿದೆ. ನ.3 ಮತ್ತು 4ರಂದು ತೈಲ ಕಂಪನಿಗಳಿಂದ ಪೆಟ್ರೋಲ್, ಡೀಸೆಲ್ ಖರೀದಿ ಇಲ್ಲ. ನ.5ರಂದು ಬೆಳಗ್ಗೆ 6ರಿಂದ 1 ಗಂಟೆವರೆಗೆ ಮಾತ್ರ ಕೆಲಸವಿರುತ್ತದೆ ಎಂದು ಅಧ್ಯಕ್ಷ ರವಿಂದ್ರನಾಥ್ ವಿವರಿಸಿದ್ದಾರೆ.
 
 
ಪ್ರತಿ ಲೀಟರ್ ಪೆಟ್ರೋಲ್, ಡಿಸೇಲ್ ಮೇಲಿನ ಕಮಿಷನ್ ಪ್ರಸ್ತುತ 2.20 ರೂ.ನಿಂದ 3.20ರೂ.ಹೆಚ್ಚಿಸಲು ಆಗ್ರಹಿಸಲಾಗಿದೆ. ಕಮೀಷನ್ ಹೆಚ್ಚಳಕ್ಕೆ ಆಗ್ರಹಿಸಿ ಇಂದು ಸಾಂಕೇತಿಕ ಧರಣಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here