ಸಹೋದರಿಯರಿಬ್ಬರ ಸಾವು

0
263

ಚಿಕ್ಕಬಳ್ಳಾಪುರ ಪ್ರತಿನಿಧಿ ವರದಿ
ಕಾರು ಹರಿದು ಸಹೋದರಿಯರಿಬ್ಬರು ಸಾವನ್ನಪ್ಪಿದ್ದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುಕ್ತಿನಾಥ ಬೆಟ್ಟದಲ್ಲಿ ಸಂಭವಿಸಿದೆ.
 
 
 
ಮೃತರನ್ನು ಛಾಯಾದೇವಿ(11), ಸಹೋದರಿ ರಕ್ಷಿತಾ(7) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಸಹೋದರಿಯರ ತಾಯಿ ಭಾಗ್ಯಮ್ಮ ಗಾಯಗೊಂಡಿದ್ದು, ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
 
 
ನಿನ್ನೆ ರಾತ್ರಿ ಮುಕ್ತಿನಾಥ ಬೆಟ್ಟದಲ್ಲಿ ನಡೆದ ಲಕ್ಷ ದೀಪೋತ್ಸವ ವೇಳೆ ಈ ದುರಂತ ಸಂಭವಿಸಿದೆ. ಬೆಟ್ಟದಿಂದ ಕೆಳಗೆ ಇಳಿಯುತ್ತಿದ್ದಾಗ ಕಾರು ಹರಿದು ಸಾವನ್ನಪ್ಪಿದ್ದಾರೆ. ಮೃತರು ಚಿಂತಾಮಣಿ ತಾಲೂಕಿನ ಬೈಯನಹಳ್ಳಿ ಗ್ರಾಮದ ನಿವಾಸಿಗಳಾಗಿದ್ದಾರೆ.
 
 
ಅಪಘಾತದ ಬಳಿಕೆ ಕಾರು ಚಾಲಕ ಕಾರನ್ನು ಸ್ಥಳದಲ್ಲೀ ಬಿಟ್ಟು ಪರಾರಿಯಾಗಿದ್ದಾನೆ. ಕೆಎ 50 9855 ಸಂಖ್ಯೆಯ ಕಾರು ಅಪಘಾತವಾಗಿದೆ. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here