ಸಹಾಯ ಹಸ್ತ

0
862


ಮೂಡುಬಿದಿರೆ: ಮಜಾಭಾರತ ಖ್ಯಾತಿಯ ಆರಾಧನಾ ಭಟ್‌ ನಡೆಸುತ್ತಿರುವ ಆರದಿರಲಿ ಬದುಕು ಆರಾಧನಾ ಸೇವಾ ತಂಡದ ಆಶ್ರಯದಲ್ಲಿ ಅಶಕ್ತರಿಗೆ ಸಹಾಯ ನೀಡುವ ಕಾರ್ಯ ಮೂಡುಬಿದಿರೆಯಲ್ಲಿ ನಡೆಯಿತು. ಆರದಿರಲಿ ಬದುಕು ಆರಾಧನಾ ತಂಡದ ತಿಂಗಳ ಸಹಾಯ ಹಸ್ತವನ್ನು ಮರದಿಂದ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾದ ಅಜೆಕಾರು ನಿವಾಸಿ ನಾಗರಾಜ ಶೆಟ್ಟಿ ಅವರಿಗೆ ನೀಡಲಾಯಿತು. ನಾಗಾರಜ್‌ ಶೆಟ್ಟಿ ಅವರ ಸಹೋದರ ಅನಂತ್ರಾಮ್ ಸಹಾಯ ಧನ ಸ್ವೀಕರಿಸಿದರು. ಈ ಸಂದರ್ಬದಲ್ಲಿ ಸಂಸ್ಥೆಯ ಸದಸ್ಯರಾದ ಪ್ರಸಾದ್ ಪುತ್ತಿಗೆ, ಅಭಿಷೇಕ್ ಶೆಟ್ಟಿ ಐಕಳ, ಪದ್ಮಶ್ರೀ ಭಟ್ ನಿಡ್ಡೋಡಿ, ರಂಜಿತಾ ಸಾವ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here