ಸಹಸ್ರಾಷ್ಟನಾಮಾವಳಿಯೊಂದಿಗೆ ಕುಂಕುಮಾರ್ಚನೆ

0
229

ವರದಿ: ಸುನೀಲ್ ಬೇಕಲ್
ಧರ್ಮಸ್ಥಳದ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲ್ಲಿ 10ನೇ ಅಕ್ಟೋಬರ್ 2016ರಂದು ನವರಾತ್ರಿಯ ಸಂದರ್ಭದಲ್ಲಿ ಕ್ಷುಲ್ಲಕ 105 ಜಿನಕೀರ್ತಿ ಮಹಾರಾಜರ ದಿವ್ಯ ಉಪಸ್ಥಿತಿಯಲ್ಲಿ ಮಾತೆ ಶ್ರೀ ಪದ್ಮಾವತಿ ದೇವಿ ಸಹಸ್ರಾಷ್ಟನಾಮಾವಳಿಯೊಂದಿಗೆ ಕುಂಕುಮಾರ್ಚನೆ ಪೂಜೆ ನಡೆಯಿತು.
 
 
ನಂತರ ಪೂಜೆಯಲ್ಲಿ ಭಾಗವಹಿಸಿದ ಎಲ್ಲಾ ಶ್ರಾವಿಕೆಯರಿಗೆ ಉಡಿ ತುಂಬಿಸಲಾಯಿತು. ಈ ಸಂದರ್ಭದಲ್ಲಿ ಡಿ.ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸಂಹಿತಾ ಶ್ರೇಯಸ್, ನಿಶ್ಚಲ್ ಕುಮಾರ್, ಪ್ರಸನ್ನಕುಮಾರ್ ಮೊದಲಾದವರು ಉಪಸ್ಥಿತರಿದ್ದು, ನೂರಾರು ಶ್ರಾವಕ ಶ್ರಾವಕಿಯರು ಕುಂಕುಮಾರ್ಚನೆಯಲ್ಲಿ ಭಾಗವಹಿಸಿ ಪುಣ್ಯಭಾಗಿಗಳಾದರು.

LEAVE A REPLY

Please enter your comment!
Please enter your name here