ಸವಾಲು ಎದುರಿಸಿ ಅನುಭವ ಪಡೆದುಕೊಳ್ಳಿ

0
230

 
ಉಜಿರೆ ಪ್ರತಿನಿಧಿ ವರದಿ
ಎಂಸಿಜೆ ವಿದ್ಯಾರ್ಥಿಗಳಿಗೆ ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ ಕಿವಿಮಾತು
ಪ್ರತಿ ಕೆಲಸದಲ್ಲೂ ಸವಾಲುಗಳು ಎದುರಾಗುತ್ತವೆ, ಅವುಗಳಿಂದ ವಿಚಲಿತರಾಗದೆ ಧೈರ್ಯದಿಂದ ಎದುರಿಸಿ ಉತ್ತಮ ಅನುಭವಗಳನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ ಹೇಳಿದರು.
 
ಉಜಿರೆ ಎಸ್ ಡಿ ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗಕ್ಕೆ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಎಂಸಿಜೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
 
ಹೆಚ್ಚಿನ ಅವಕಾಶ:
ಇಂದು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಹಿಂದಿಂಗಿಂತಲೂ ಉತ್ತಮ ಸೌಲಭ್ಯಗಳ ಜತೆಗೆ ಹೆಚ್ಚಿನ ಅವಕಾಶಗಳು ದೊರೆಯುತ್ತಿವೆ. ವಿದ್ಯಾರ್ಥಿಗಳು ಕ್ರಿಯಾಶೀಲರಾಗಿದ್ದುಕೊಂಡು ಅವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.
 
 
 
ಸರ್ಕಾರದ ಪ್ರಚಾರವೆ ಮುಖ್ಯ ಕೆಲಸ:
ಪತ್ರಕರ್ತರನ್ನು ಸಂಭಾಳಿಸಿಕೊಂಡು ಮಾಧ್ಯಮಗಳಲ್ಲಿ ಸರ್ಕಾರದ ಕುರಿತು ಉತ್ತಮ ಅಭಿಪ್ರಾಯ ಮೂಡುವಂತೆ ಮಾಡಿ, ಸರ್ಕಾರಕ್ಕೆ ಪ್ರಚಾರ ನೀಡುವುದೆ ವಾರ್ತಾ ಮತ್ತು ಪ್ರಚಾರ ಇಲಾಖೆಯ ಮುಖ್ಯ ಕೆಲಸ. ಸರ್ಕಾರದ ಇಲಾಖೆಗಳು ಹಾಗೂ ಮಾಧ್ಯಮಗಳ ನಡುವೆ ಸೇತುವೆ ರೀತಿಯಲ್ಲಿ ಕೆಲಸ ಮಾಡಬೇಕೆಂದರು.
 
 
ದೂರುಗಳನ್ನು ನೇರವಾಗಿ ಕಳುಹಿಸಿ:
ಮಾಧ್ಯಗಳಲ್ಲಿ ಬರುವ ದೂರುಗಳನ್ನು ಆಯಾ ಇಲಾಖೆಗಳ ಗಮನಕ್ಕೆ ತರುವ ಕೆಲಸವನ್ನು ನಮ್ಮ ಇಲಾಖೆ ಮಾಡುತ್ತಿದೆ. ಸ್ಥಳೀಯ ಮಟ್ಟದ ಕುಂದುಕೊರತೆಗಳನ್ನು ವಿದ್ಯಾರ್ಥಿಗಳು ಪತ್ರಿಕೆಗಳಿಗೆ ಕಳುಹಿಸುವ ಜತೆಗೆ ನೇರವಾಗಿ ತಮಗೆ ಕಳುಹಿಸಿದರೆ ಸಂಬಂಧಪಟ್ಟ ಇಲಾಖೆಗಳಿಗೆ ತಲುಪಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥ ಪ್ರೊ. ಭಾಸ್ಕರ್ ಹೆಗ್ಡೆ ಸ್ವಾಗತಿಸಿದರು. ಪ್ರಾಸ್ತಾವಿಕ ಮಾತನಾಡಿದರು. ಚೈತನ್ಯ ಕುಡಿನಲ್ಲಿ ವಂದಿಸಿದರು.

LEAVE A REPLY

Please enter your comment!
Please enter your name here